Spread the love

ಶಂಕರನಾರಾಯಣ: ದಿನಾಂಕ 07-08-2023(ಹಾಯ್ ಉಡುಪಿ ನ್ಯೂಸ್) ಬೆಳ್ವೆ ಗ್ರಾಮದ ಸಾರ್ವಜನಿಕ ಬಸ್ಸು ನಿಲ್ದಾಣದ ಒಳಗೆ ಶರಾಬು ಸೇವನೆ ಮಾಡುತ್ತಿದ್ದ ವ್ಯಕ್ತಿ ಯನ್ನು ಶಂಕರನಾರಾಯಣ ಪೊಲೀಸ್‌ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ನಾಸಿರ್ ಹುಸೇನ್ ರವರು ಬಂಧಿಸಿದ್ದಾರೆ.

ಶಂಕರನಾರಾಯಣ ಪೊಲೀಸ್‌ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ನಾಸಿರ್ ಹುಸೇನ್ ರವರಿಗೆ ದಿನಾಂಕ:06-08-2023ರಂದು ಹೆಬ್ರಿ ತಾಲೂಕಿನ ಬೆಳ್ವೆ ಗ್ರಾಮದ,ಗುಮ್ಮ ಹೊಲ ಎಂಬಲ್ಲಿ ಇರುವ ಸಾರ್ವಜನಿಕ ಬಸ್ಸು ನಿಲ್ದಾಣದಲ್ಲಿ ವ್ಯಕ್ತಿ ಯೋರ್ವರು ಮದ್ಯ ಸೇವನೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಬಂದಿದ್ದು ಕೂಡಲೇ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ   ದಾಳಿ ನಡೆಸಿ ಬಸ್ಸು ನಿಲ್ದಾಣದ ಒಳಗಡೆ ಕುಳಿತು ಶರಾಬು ಸೇವನೆ ಮಾಡುತ್ತಿದ್ದ ವಿಲ್ಸನ್ ಪ್ಲಾರೆಸ್ (47) ವಾಸ: ಗುಮ್ಮಹೊಲ, ಬೆಳ್ವೆ ಗ್ರಾಮ , ಹೆಬ್ರಿ ಎಂಬಾತನನ್ನು ಬಂಧಿಸಿ ಆತನ ವಶದಲ್ಲಿದ್ದ ಪ್ಲಾಸ್ಟಿಕ್ ಲೋಟ  ಶರಾಬು ಮಿಶ್ರಣ ಮಾಡಿರುವ ನೀರಿನ ಪ್ಲಾಸ್ಟಿಕ್ ಬಾಟಲಿ-1.  Original choice whicky 90 ml  ನ ಸ್ಯಾಚೆಟ್ -1  ಹಾಗೂ Original choice whicky 90 ml  ನ ಖಾಲಿ  ಸ್ಯಾಚೆಟ್-2 ನ್ನು ವಶಪಡಿಸಿಕೊಂಡಿರುತ್ತಾರೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಕಲಂ:  15 (ಎ) ಕರ್ನಾಟಕ  ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ.   

error: No Copying!