ಕುಂದಾಪುರ: ದಿನಾಂಕ:07-08-2023(ಹಾಯ್ ಉಡುಪಿ ನ್ಯೂಸ್) ಮದುವೆ ಆಗುವಾಗ ಗಂಡಿನ ಮನೆಯವರು ವರದಕ್ಷಿಣೆ ಪಡೆದು ಇದೀಗ ಹೆಚ್ಚಿನ ವರದಕ್ಷಿಣೆ ಹಣ ತರುವಂತೆ ದೈಹಿಕ, ಮಾನಸಿಕ ಹಿಂಸೆ ನೀಡಿ ಕೊಲೆಬೆದರಿಕೆ ಹಾಕಿರುವ ಬಗ್ಗೆ ಮಹಿಳೆಯೋರ್ವರು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದಿನಾಂಕ 18.01.2021 ರಂದು ಅವಿನಾಶ್ ಕ್ರಷ್ಣ ನಾಯ್ಕ ಎಂಬವರನ್ನು ತ್ರಾಸಿ ಕಮ್ಮಾರಕೊಡ್ಲುವಿನ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಹಿಂದು ಸಂಪ್ರದಾಯದಂತೆ ಶೈಲಾ ಎಂಬವರು ವಿವಾಹವಾಗಿರುತ್ತಾರೆ. ಆರೋಪಿ ಭದ್ರ ಕುಲಾಲ್ ಎಂಬವನು ಈ ಮದುವೆಗೆ ಮಧ್ಯವರ್ತಿಯಾಗಿದ್ದಾನೆ ಎಂದು ದೂರಿದ್ದಾರೆ.
ಗಂಡನ ಮನೆಯವರು ವಿವಾಹದ ಸಮಯ ವರದಕ್ಷಿಣೆ ರೂಪದಲ್ಲಿ 5,00,000/- ಚಿನ್ನಾಭರಣವನ್ನು ಹಾಗೂ ಮದುವೆಗೆ ಮುಂಚೆ ಶೈಲಾರವರ ತಂದೆಯವರಿಂದ ರೂ. 5,00,000/- ಹಣವನ್ನು ಗಂಡನ ಮನೆಯವರಾದ ಚಂದ್ರಾವತಿ ನಾಯ್ಕ, ವಿನಾಯಕ ನಾಯ್ಕ, ಪ್ರಭಾಕರ ನಾಯ್ಕ, ಲಲಿತಾ, ಶಕುಂತಲಾ ಎಂಬ ಆರೋಪಿಗಳು ಪಡೆದುಕೊಂಡಿರುತ್ತಾರೆಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಶೈಲಾರವರು ವಿವಾಹದ ನಂತರ ಗಂಡನೊಂದಿಗೆ ಮುಂಬೈನಲ್ಲಿ ವೈವಾಹಿಕ ಜೀವನ ಆರಂಭಿಸಿದ್ದು, ಆರಂಭದಲ್ಲಿ ಗಂಡನಾದ ಅವಿನಾಶ್ ಕ್ರಷ್ಣ ನಾಯ್ಕ ಶೈಲಾರನ್ನು ಚೆನ್ನಾಗಿ ನೋಡಿಕೊಂಡಿದ್ದು ಮದುವೆಯ 3 ತಿಂಗಳ ಬಳಿಕ ಶೈಲಾರವರ ಗಂಡ, ಅತ್ತೆ ಹಾಗೂ ಮನೆಯವರು ಶೈಲಾರಿಗೆ ದೈಹಿಕ ಹಿಂಸೆ ನೀಡಲು ಪ್ರಾರಂಭಿಸಿದ್ದು, ಶೈಲಾ ರ ತಂದೆಯವರು ಮದುವೆಯ ಸಮಯ ಹಾಕಿರುವ 5,00,000/- ಕ್ಕೂ ಅಧಿಕ ಬೆಲೆ ಬಾಳುವ ಚಿನ್ನಾಭರಣಗಳನ್ನು ಬೆದರಿಸಿ ಪಡೆದುಕೊಂಡು ಚಿನ್ನವನ್ನು ದುರುಪಯೋಗ ಪಡಿಸಿಕೊಂಡಿರುತ್ತಾರೆ ಎಂದು ದೂರಿದ್ದಾರೆ.
2022 ನೇ ಅಗಸ್ಟ್ ತಿಂಗಳಲ್ಲಿ ಇನ್ನೂ ಹೆಚ್ಚಿನ ವರದಕ್ಷಿಣೆಯನ್ನು ತರುವಂತೆ ಹೇಳಿ ಒತ್ತಾಯ ಪೂರ್ವಕವಾಗಿ ಶೈಲಾರನ್ನು ತಂದೆಯ ಮನೆಗೆ ಕಳುಹಿಸಿಕೊಟ್ಟಿರುತ್ತಾರೆ ಎಂದಿದ್ದಾರೆ. ನಂತರ ಶೈಲಾ ರು ತನ್ನ ತಂದೆಯ ಮನೆಯಲ್ಲಿದ್ದಾಗ ದಿನಾಂಕ:30-07-2023 ರಂದು ಗಂಡನಾದ ಅವಿನಾಶ್ ಕ್ರಷ್ಣ ನಾಯ್ಕನು ಶೈಲಾರಿಗೆ ಕರೆ ಮಾಡಿ ರೂ. 5,00,000/- ವರದಕ್ಷಿಣೆ ತರುವುದಾದರೇ ಮಾತ್ರ ಮುಂಬೈಗೆ ಬಂದು ತನ್ನೊಂದಿಗೆ ವಾಸವಾಗಿರುವಂತೆ, ವರದಕ್ಷಿಣೆ ತರದೇ ವಾಪಾಸು ಮುಂಬೈಗೆ ಬಂದಲ್ಲಿ ಕೊಲ್ಲುವುದಾಗಿ ಗಂಡ ಅವಿನಾಶ್ ಕ್ರಷ್ಣ ನಾಯ್ಕ ಹಾಗೂ ಚಂದ್ರಾವತಿ ನಾಯ್ಕ ಕೊಲೆ ಬೆದರಿಕೆ ಹಾಕಿರುತ್ತಾರೆ ಎಂದು ನೊಂದ ಶೈಲಾ ರವರು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 498(a), 506 ಜೊತೆಗೆ 149 ಐ.ಪಿ.ಸಿ ಮತ್ತು 3, 4 ಮತ್ತು 6 ವರದಕ್ಷಿಣೆ ನಿಷೇದ ಕಾಯಿದೆಯಂತೆ ಪ್ರಕರಣ ದಾಖಲಾಗಿದೆ.