ಪಡುಬಿದ್ರಿ: ಪಾದೆಬೆಟ್ಟು ಗ್ರಾಮದ ಕೆರೆಮನೆ ರಸ್ತೆ, ನಿವಾಸಿ ಮೊಹಮ್ಮದ್ ರಾಝಿಕ್(38) ಅವರು ಉಡುಪಿ ಜಿಲ್ಲೆ, ಕಾಪು ತಾಲೂಕು ನಡ್ಸಾಲು ಗ್ರಾಮದ, ಪಡುಬಿದ್ರಿಯ ಕಾರ್ಕಳ ರಸ್ತೆಯಲ್ಲಿ ಎ.ಕೆ. ಎಂಟರ್‌ಪ್ರೈಸಸ್ ಹೆಸರಿನ ಹಳೆಯ ದ್ವಿಚಕ್ರ ವಾಹನಗಳ ಖರೀದಿ ಮತ್ತು ಮಾರಾಟ ಮಾಡುವ ವ್ಯವಹಾರ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಮೊಹಮ್ಮದ್ ರಾಝಿಕ್ ಅಂಗಡಿಯ ಬಳಿ ಅವರ ತಾಯಿಯ ಹೆಸರಿನಲ್ಲಿ ಅವರ ಅಣ್ಣ ಖರೀದಿಸಿದ KA-20-ME-7463 ನೇ ನಂಬ್ರದ ಜೆ.ಸಿ.ಬಿಯನ್ನು ಅದರ ಚಾಲಕ ನಿನ್ನೆ ದಿನ ದಿನಾಂಕ:02.08.2023 ರಂದು ಸಂಜೆ ನಿಲ್ಲಿಸಿ ಹೋಗಿದ್ದು, ನಂತರ ಮೊಹಮ್ಮದ್ ರಾಝಿಕ್ ಅಂಗಡಿಗೆ ಬೀಗ ಹಾಕಿ ಹೋಗಿರುತ್ತಾರೆ ಎಂದು ಕೊಂಡಿದ್ದಾರೆ. ಈ ವೇಳೆ ಯಾರೋ ಕಳ್ಳರು ನಿನ್ನೆ ದಿನ ರಾತ್ರಿ KA-20-ME-7463 ನೇ ನಂಬ್ರದ ಜೆ.ಸಿ.ಬಿ ಯನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ಜೆಸಿಬಿಯ ಅಂದಾಜು ಮೌಲ್ಯ ರೂ 12,00,000/- ಆಗಿರುತ್ತದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಕಲಂ: 379 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.