ಗಂಗೊಳ್ಳಿ: ದಿನಾಂಕ:03-08-2023(ಹಾಯ್ ಉಡುಪಿ ನ್ಯೂಸ್) ನೂಜಾಡಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ವ್ಯಕ್ತಿಯನ್ನು ಗಂಗೊಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಯವರಾದ ಹರೀಶ್ ಆರ್ ರವರು ಬಂಧಿಸಿದ್ದಾರೆ.
ಗಂಗೊಳ್ಳಿ ಠಾಣೆಯ ಪಿಎಸ್ಐ ಯವರಾದ ಹರೀಶ್ ಆರ್ ರವರು ದಿನಾಂಕ 02/08/2023 ರಂದು ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಕುಂದಾಪುರ ತಾಲೂಕು ನೂಜಾಡಿ ಗ್ರಾಮದ ಬಸ್ಸು ನಿಲ್ದಾಣದ ಬಳಿ ಸಾರ್ಜಜನಿಕ ಸ್ಥಳದಲ್ಲಿ ದಿನಕರ ಎಂಬುವವರು ಮಟ್ಕಾ ಜುಗಾರಿ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ಖಚಿತ ಮಾಹಿತಿ ಬಂದ ಮೇರೆಗೆ ಠಾಣೆಯ ಸಿಬ್ಬಂದಿಗಳೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ ದಾಳಿ ನಡೆಸಿ ಮಟ್ಕಾ ಜುಗಾರಿ ನಡೆಸುತ್ತಿದ್ದ ದಿನಕರ ಎಂಬಾತನನ್ನು ಬಂಧಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾನು ಸ್ವಂತ ಲಾಭಕ್ಕೋಸ್ಕರ ಮಟ್ಕಾ ಚೀಟಿ ಬರೆಯುತ್ತಿರುವುದಾಗಿ ತಿಳಿಸಿದ್ದು, ಮಟ್ಕಾ ಜುಗಾರಿಗೆ ಬಳಸಿದ ಮಟ್ಕಾ ಚೀಟಿ-1, ಬಾಲ್ ಪೆನ್ನು-1 ಹಾಗೂ 1,040/-ರೂ ನಗದನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಕಲಂ:78(I),78(III) ಕರ್ನಾಟಕ ಪೊಲೀಸ್ ಕಾಯ್ದೆ 2021 ರಂತೆ ಪ್ರಕರಣ ದಾಖಲಾಗಿದೆ.