ಧರ್ಮಸ್ಥಳ ಗ್ರಾಮ ನಿವಾಸಿ ಸೌಜನ್ಯಾ ರೇಪ್ & ಮರ್ಡರ್ ಪ್ರಕರಣದ ಬಗ್ಗೆ ಬೆಂಗಳೂರಿನ ಸಿಬಿಐ ನ್ಯಾಯಾಲಯ ತೀರ್ಪು ಪ್ರಕಟಿಸಿ ಒಂದೂವರೆ ತಿಂಗಳೇ ಕಳೆಯಿತು.
ತೀರ್ಪಿನಲ್ಲಿ ನ್ಯಾಯಾಲಯ ಕೆಲವು ಗಂಭೀರ ವಿಷಯಗಳನ್ನು ಪ್ರಸ್ತಾಪಿಸಿದೆ. ಪ್ರಕರಣದ ತನಿಖೆಯನ್ನು ಆರಂಭದಲ್ಲಿ ನಡೆಸಿದ ಪೊಲೀಸ್ ಅಧಿಕಾರಿಗಳು ಹಾಗೂ ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಯ ವೈದ್ಯರು (ಡಾ. ಆದಂ , ಡಾ. ರಶ್ಮಿ) ಕರ್ತವ್ಯಲೋಪ ಎಸಗಿರುವುದು ಮತ್ತು ಸಾಕ್ಷ್ಯ ನಾಶಪಡಿಸಿರುವ ಬಗ್ಗೆ.
ತೀರ್ಪು ಪ್ರಾಸಿಕ್ಯೂಷನ್ ವಿರುದ್ಧವಿರುವುದು ಸ್ಪಷ್ಟ. ಇಷ್ಟಾಗಿಯೂ ರಾಜ್ಯ ಸರಕಾರ ಇನ್ನು ಸಹ ಅಪ್ರಾಪ್ತ ಪ್ರಾಯದ ಕಾಲೇಜು ವಿದ್ಯಾರ್ಥಿನಿಯ ರೇಪ್ & ಮರ್ಡರ್ ಪ್ರಕರಣದಲ್ಲಿ ಕರ್ತವ್ಯಲೋಪ ಮತ್ತು ಸಾಕ್ಷ್ಯನಾಶ ಮಾಡಿದ ಆರೋಪಿ ಅಧಿಕಾರಿಗಳನ್ನು ಅಮಾನತುಪಡಿಸಿ, ಅವರ ವಿರುದ್ದ ಕ್ರಮಿನಲ್ ಕೇಸು ದಾಖಲಿಸಿ ತೀವ್ರ ವಿಚಾರಣೆ ನಡೆಸಿ ಬಾಯಿ ಬಿಡಿಸುವ ಮೂಲಕ ರೇಪ್ & ಮರ್ಡರ್ ಮಾಡಿದವರ ಜೊತೆಗೆ ಹೆಡೆಮುರಿ ಕಟ್ಟಿ ಜೈಲಿ ಕಂಬಿಗಳೊಳಗೆ ತಳ್ಳಲು ಮೀನ ಮೇಷ ಎಣಿಸುತ್ತಿರುವುದು ಖಂಡನೀಯ.
ಗಂಭೀರ ಪ್ರಕರಣದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವಲ್ಲಿ ಸರಕಾರದ ಈ ರೀತಿಯ ವಿಳಂಬ ನೀತಿಯಿಂದಾಗಿ ನಿಜವಾದ ರೇಪಿಸ್ಟರಿಗೆ (ವೃತ್ತಿಪರ ರೇಪಿಸ್ಟರು ?) ವರದಾನವಾಗಿ ಪರಿಣಮಿಸಲಿದೆ. ಇಂಥ ಪ್ರಕರಣಗಳಲ್ಲಿ ಸರಕಾರ ಎಡಬಿಡಂಗಿತನ ಪ್ರದರ್ಶಿದರೆ ಅದಕ್ಕೆ ಖಂಡಿತಾ ಯಾರೂ ಕ್ಷಮಿಸಲಾರರು, ಕ್ಷಮಿಸಬಾರದು.
~ ಶ್ರೀರಾಮ ದಿವಾಣ (ಮೂಡುಬೆಳ್ಳೆ ಉಡುಪಿ )
31/07/2023