ಹವಾಮಾನ ಇಲಾಖೆಯಿಂದ ಆರೆಂಜ್ ಅಲರ್ಟ್
ಉಡುಪಿ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿದ್ದು ಹವಾಮಾನ ಇಲಾಖೆ ಉಡುಪಿ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ. ಮುಂಜಾಗರೂಕತೆಯ ಕ್ರಮವಾಗಿ ಉಡುಪಿ ಜಿಲ್ಲಾಧಿಕಾರಿಯವರಾದ ವಿದ್ಯಾಕುಮಾರಿಯವರು ಮಕ್ಕಳ ಹಿತ ದೃಷ್ಟಿಯಿಂದ ಅಂಗನವಾಡಿಯಿಂದ ಮೊದಲ್ಗೊಂಡು ಪದವಿ ಪೂರ್ವ ಕಾಲೇಜುಗಳಿಗೆ ನಾಳೆ ಜುಲೈ:24ರಂದು ರಜೆ ಘೋಷಿಸಿದ್ದಾರೆ.