Spread the love

ಬೈಂದೂರು: ದಿನಾಂಕ: 23/07/2023 (ಹಾಯ್ ಉಡುಪಿ ನ್ಯೂಸ್) ಯಡ್ತರೆ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ ನಾಲ್ವರನ್ನು ಬೈಂದೂರು ಪೊಲೀಸ್‌ ವ್ರತ್ತ ನಿರೀಕ್ಷಕರಾದ ಸಂತೋಷ್ ಎ ಕಾಯ್ಕಿಣಿ ಅವರು ಬಂಧಿಸಿದ್ದಾರೆ.

ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕರಾದ ಸಂತೋಷ್ ಎ ಕಾಯ್ಕಿಣಿ ಅವರು ರೌಂಡ್ಸ್ ಕರ್ತವ್ಯದಲ್ಲಿರುವಾಗ ಪೊಲೀಸ್ ಬಾತ್ಮೀದಾರರೊಬ್ಬರು ಕರೆಮಾಡಿ ಯಡ್ತರೆ ಗ್ರಾಮದ ಅಂಬಿಕಾ ಹೊಟೇಲ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜುಗಾರಿ ಆಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ನೀಡಿದ್ದು ಆ ಕೂಡಲೇ ಸಂತೋಷ್ ಎ ಕಾಯ್ಕಿಣಿ ಅವರು ಇಲಾಖಾ ವಾಹನದಲ್ಲಿ ಸಿಬ್ಬಂದಿಗಳೊಂದಿಗೆ ಯಡ್ತರೆ ಗ್ರಾಮದ ಅಂಬಿಕಾ ಹೊಟೇಲ್ ಹಿಂಬದಿಯ ಸಾರ್ವಜನಿಕ ಸ್ಥಳದಲ್ಲಿ ಸ್ವಂತ ಲಾಭಕ್ಕಾಗಿ ಹಣವನ್ನು ಪಣವಾಗಿಟ್ಟು ಇಸ್ಪೀಟು ಎಲೆಗಳಿಂದ ಜುಗಾರಿ ಆಟವಾಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ್ದಾರೆ.

ದಾಳಿ ನಡೆಸಿದಾಗ ಅಲ್ಲಿ ಇಸ್ಪೀಟು ಆಟವಾಡುತ್ತಿದ್ದ 1] ಕೃಷ್ಣ ಕುಮಾರ್ (38) ವರ್ಷ ವಾಸ: ತಗ್ಗರ್ಸೆ ಗ್ರಾಮ ಬೈಂದೂರು ತಾಲೂಕು. 2] ಪ್ರಶಾಂತ ಕುಮಾರ್ (29) ವಾಸ: ತಗ್ಗರ್ಸೆ ಗ್ರಾಮ ಬೈಂದೂರು ತಾಲೂಕು. 3] ಕೃಷ್ಣ (40) ವಾಸ:ಮಡಿಕಲ್ ಉಪ್ಪುಂದ ಗ್ರಾಮ ಬೈಂದೂರು ತಾಲೂಕು. 4] ನಾಗರಾಜ (32) ವಾಸ: ಉಪ್ಪುಂದ ಗ್ರಾಮ ಬೈಂದೂರು ತಾಲೂಕು ಎಂಬವರನ್ನು ಬಂಧಿಸಿ ವಶಕ್ಕೆ ಪಡೆದುಕೊಂಡು ಆಟಕ್ಕೆ ಬಳಸಿದ ಹಳೆಯ ಪ್ಲಾಸ್ಟಿಕ್ ಚೀಲ -1, ಇಸ್ಪೀಟ್‌ ಕಾರ್ಡ್-52, ಹಾಗೂ 22,500/- ರೂಪಾಯಿ ನಗದನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕಲಂ. 87 KP ACT ದಂತೆ ಪ್ರಕರಣ ದಾಖಲಾಗಿದೆ.

error: No Copying!