Spread the love
  • ಮಣಿಪಾಲ:  ದಿನಾಂಕ 20/07/2023 (ಹಾಯ್ ಉಡುಪಿ ನ್ಯೂಸ್) ಮಣಿಪಾಲ ಎಂ.ಐ.ಟಿ ಸರ್ಕಲ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ವ್ಯಕ್ತಿಯನ್ನು ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಅಬ್ದುಲ್ ಖಾದರ್ ರವರು ಬಂಧಿಸಿದ್ದಾರೆ.,
  • ಮಣಿಪಾಲ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಅಬ್ದುಲ್ ಖಾದರ್ ಅವರಿಗೆ ಉಡುಪಿ ತಾಲೂಕು ಮಣಿಪಾಲ ಹೆರ್ಗಾ ಗ್ರಾಮದ ಎಂ ಐ .ಟಿ ಸರ್ಕಲ್ ಬಳಿ ವ್ಯಕ್ತಿ ಯೋರ್ವರು ಮಟ್ಕಾ ಜುಗಾರಿ ಆಟ ನಡೆಸುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ಆ ಕೂಡಲೇ ದಾಳಿ ನಡೆಸಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ  ಆರೋಪಿ ಜಯಪ್ರಕಾಶ (45), ವಿಳಾಸ:ಇಂಡಸ್ಟ್ರಿಯಲ್‌ಏರಿಯಾ Stationary Manufacturing Printing ಫ್ಲಾಟ್‌ ನಂಬ್ರ: 29ಡಿ,ಶಿವಳ್ಳಿ ಗ್ರಾಮ ಮಣಿಪಾಲ ಉಡುಪಿ ಎಂಬಾತನನ್ನು ಬಂಧಿಸಿ ವಶಕ್ಕೆ ಪಡೆದು ಆರೋಪಿ ಬಳಸುತ್ತಿದ್ದ ಮಟ್ಕಾ ಚೀಟಿ, ಬಾಲ್‌ಪೆನ್‌ ಹಾಗೂ  ನಗದು ರೂಪಾಯಿ 1,015/- ಸ್ವಾಧೀನಪಡಿಸಿಕೊಂಡಿರುತ್ತಾರೆ.
  • ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಕಲಂ: 78(I)(III) KP Act ರಂತೆ ಪ್ರಕರಣ ದಾಖಲಾಗಿದೆ.
error: No Copying!