Spread the love
  • ಹಿರಿಯಡ್ಕ: ದಿನಾಂಕ 20/07/2023  (ಹಾಯ್ ಉಡುಪಿ ನ್ಯೂಸ್) ಬೊಮ್ಮರಬೆಟ್ಟು ಗ್ರಾಮದ ಮಾಣೈ ಸೇತುವೆ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ವ್ಯಕ್ತಿ ಯನ್ನು ಹಿರಿಯಡ್ಕ ಪೊಲೀಸ್ ಠಾಣಾ ಪಿಎಸ್ಐ ಯವರಾದ ಮಂಜುನಾಥ ರವರು ಬಂಧಿಸಿದ್ದಾರೆ.
  • ಹಿರಿಯಡ್ಕ ಪೊಲೀಸ್ ಠಾಣಾ ಪಿ ಎಸ್ ಐ ಯವರಾದ ಮಂಜುನಾಥ ಅವರು ದಿನಾಂಕ:19-07-2023ರಂದು ಠಾಣಾ ಇಲಾಖಾ ವಾಹನದಲ್ಲಿ ಹಗಲು ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಬೆಳಗ್ಗೆ 09:00 ಗಂಟೆ ಸಮಯಕ್ಕೆ, ಬೊಮ್ಮರಬೆಟ್ಟು ಗ್ರಾಮದ ಮಾಣೈ  ಸೇತುವೆ ಮೇಲೆ ಸಾರ್ವಜನಿಕ ಸ್ಥಳದಲ್ಲಿ  ಓರ್ವ ಮದ್ಯ ಸೇವನೆ ಮಾಡುತ್ತಿರುವುದು ಕಂಡು ಬಂದಿರುತ್ತದೆ. ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ಆರೋಪಿ ಶೇಖರ ಎಂಬವನಾಗಿದ್ದು ಆತನ ಬಳಿಗೆ ಹೋಗಿ ಆರೋಪಿಯ ಕೈಯಲ್ಲಿ ORIGINAL CHOICE ಎಂದು ಬರೆದಿರುವ 180 ML ನ  ಖಾಲಿಯಾಗಿರುವ ಟೆಟ್ರಾ ಪ್ಯಾಕೆಟ್ ಇದ್ದು, ಆರೋಪಿ ಶೇಖರನಿಗೆ ಆತನ ತಪ್ಪನ್ನು ತಿಳಿಸಿ ಆರೋಪಿಯನ್ನು ಬಂಧಿಸಿ ವಶಕ್ಕೆ ಪಡೆದು ಅತನ ಬಳಿಯಿದ್ದ ಮದ್ಯದ ಪ್ಯಾಕೆಟ್ ಅನ್ನು ವಶಪಡಿಸಿಕೊಂಡಿದ್ದಾರೆ.
  • ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಕಲಂ 15 (A), , 32(3) KE Act ನಂತೆ ಪ್ರಕರಣ ದಾಖಲಾಗಿದೆ.

error: No Copying!