Spread the love


ಹನೂರು : ದಿನಾಂಕ:14-07-2023(ಹಾಯ್ ಉಡುಪಿ ನ್ಯೂಸ್) ಹನೂರು ಪಟ್ಟಣದ ಕರ್ನಾಟಕ ಪತ್ರಕರ್ತರ ಸಂಘದ ಕಛೇರಿಯಲ್ಲಿ ಇಂದು ಸಂಘದ ಸಾಮಾನ್ಯ ಸಭೆಯನ್ನು ಕರೆಯಲಾಗಿತ್ತು.
ಆ ಸಭೆಯಲ್ಲಿ ಕರ್ನಾಟಕ ಪತ್ರಕರ್ತರ ಸಂಘಕ್ಕೆ ಸಂಘದ ಧ್ಯೇಯ ಹಾಗೂ ಸಂಘದ ಚಟುವಟಿಕೆಗಳ ಬಗ್ಗೆ ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯಾದ್ಯಕ್ಷ ಶ್ರೀಯುತ ಮುರುಗೇಶ್ ಶಿವಪೂಜಿ ಅವರ ಸೂಚನೆಯ ಮೇರೆಗೆ ಜಿಲ್ಲಾ ಸಂಚಾಲಕರಾದ ಹಾಗೂ ತಾಲ್ಲೂಕು ಗೌರವ ಅಧ್ಯಕ್ಷರಾದ ಬಂಗಾರಪ್ಪ ಸಿ ಸಮ್ಮುಖದಲ್ಲಿ
ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.
ಈ ಸಂಘವು ರಾಷ್ಟ್ರೀಯ ಹಾಗೂ ರಾಜ್ಯದ ಮಾನ್ಯತೆಯನ್ನು ಪಡೆದಿರುತ್ತದೆ ಬೇರೆ ಬೇರೆ ಸಂಘಗಳಂತೆ ಬರಿ ಪತ್ರಕರ್ತರಾದವರಿಗೆ ಮಾತ್ರ ಗುರುತಿನ ಪತ್ರ (ಮೀಡಿಯಾ ಕಾರ್ಡ್) ನೀಡದೆ ಪತ್ರಿಕೆಗಳನ್ನು ಹಂಚುವವರಿಗೆ ಪತ್ರಿಕೆಗಳ ಏಜಂಟರುಗಳಿಗೂ ನೀಡುವ ಸೌಲಭ್ಯ ಈ ಕರ್ನಾಟಕ ಪತ್ರಕರ್ತರ ಸಂಘದಲ್ಲಿ ಇರುವುದರಿಂದ ಎಲ್ಲಾ ಪತ್ರಕರ್ತರು ಸಹ ಬಾಗಿಯಾಗಿ ನೋಂದಣಿ ಮಾಡಿಸಿಕೊಳ್ಳಿ ಅಲ್ಲದೆ
ರಾಜ್ಯದಲ್ಲಿ ಪ್ರಮುಖವಾಗಿ ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರು ಸದಾಕಾಲ ಸಭೆ ಸಮಾರಂಭಗಳೆಂದು ಓಡಾಡುವ ಪತ್ರಕರ್ತರು ಅನೇಕ ಬಾರಿ ಅಪಘಾತಗಳಿಗೆ ಒಳಗಾಗಿ ಎಷ್ಟೋ ಬಾರಿ ಚಿಕಿತ್ಸೆಗೆ ಹಣ ಇಲ್ಲದೆ ಪರದಾಡುವ ಸ್ಥಿತಿ ಎದುರಿಸುತ್ತಾರೆ ಎಷ್ಟೋ ಬಾರಿ ಸಮಾಜ ಕಂಟಕರಿಂದ ಹಲ್ಲೆಗೆ ಒಳಗಾಗುತ್ತಾರೆ ಅಂಥವರಿಗೆ ಸಹಾಯವಾಗಲೆಂದು ಸಂಘವು ಸದಸ್ಯ ಪತ್ರಕರ್ತರಿಗೆ 4 ಲಕ್ಷ ರೂಪಾಯಿಗಳ ಜನತಾ ಅಪಘಾತ ವಿಮಾ ಸೌಲಭ್ಯವನ್ನು ಕಳೆದ ಹಲವಾರು ವರ್ಷಗಳಿಂದ ನೀಡಲಾಗುತ್ತಿದೆ ಅಪಘಾತದಿಂದ ನಿಧನರಾಗುವ ಸದಸ್ಯರ ಸಂಬಂಧಿಕರಿಗೆ 4 ಲಕ್ಷ ರೂ ಮತ್ತು ಅಪಘಾತದಿಂದ ಆಸ್ಪತ್ರೆಗೆ ದಾಖಲಾಗುವ ಸದಸ್ಯರಿಗೆ ಗರಿಷ್ಠ70 ಸಾವಿರ ರೂ.ಗಳ ಚಿಕಿತ್ಸೆ ವೆಚ್ಚವನ್ನು ನೀಡಲಾಗುತ್ತಿದೆ.
ಈ ಯೋಜನೆ ನಮ್ಮ ಸಂಘದಲ್ಲಿ ಮಾತ್ರ ಇದ್ದು ಈ ಸೌಲಭ್ಯದ ಲಾಭವನ್ನು ವಿವಿಧ ಜಿಲ್ಲೆಗಳ ಪತ್ರಕರ್ತರು ಪಡೆದುಕೊಂಡಿದ್ದಾರೆ.
ಇದಲ್ಲದೆ ವಿವಿಧ ಜಿಲ್ಲೆಗಳ ಎಂಟು ಸದಸ್ಯರು ಸೇರಿ ಪತ್ರಕರ್ತರಿಗಾಗಿ “ಕರ್ನಾಟಕ ಜರ್ನಲಿಸ್ಟ್ ಯೂನಿಯನ್” ಟ್ರಸ್ಟ್ (ಇಂಡಿಯನ್ ಟ್ರಸ್ಟ್ ಕಾಯಿದೆ) ಒಂದನ್ನು ಸ್ಥಾಪಿಸಿ ತಮ್ಮ ಸ್ವಂತ (ಟ್ರಸ್ಟಿಗಳಿಂದ ವೈಯಕ್ತಿಕ ವಂತಿಕೆ) ಹಣವನ್ನು ಒಂದು ನಿಧಿ ಮಾಡಿ ಫಿಕ್ಸ್ ಡಿಪಾಸಿಟ್ ಮಾಡಲಾಯಿತು ಪ್ರತಿ ವರ್ಷ ಈ ನಿಧಿಯಿಂದ ಬರುವ ಬಡ್ಡಿ ಹಣವನ್ನು ಮಾತ್ರ ಕಷ್ಟದಲ್ಲಿರುವ ಪತ್ರಕರ್ತರಿಗೆ ಸಹಾಯ ಮಾಡುವ ಕಾರ್ಯವನ್ನು ಹಲವಾರು ವರ್ಷಗಳಿಂದ ನಡೆಸಲಾಗುತ್ತಿದೆ ಪ್ರತಿವರ್ಷ ಈ ಟ್ರಸ್ಟ್ ಮೂಲ ನಿಧಿಯನ್ನು ಬಳಸದೆ ಬಡ್ಡಿ ಹಣವನ್ನು ಮಾತ್ರ ಅತಿ ಅಗತ್ಯ ಇರುವ ಪತ್ರಕರ್ತರಿಗೆ ಹಿರಿಯ ಪತ್ರಕರ್ತರ ಚಿಕೆತ್ಸೆ ಮತ್ತು ಅಕಾಲ ಮರಣಕ್ಕೆ ತುತ್ತಾಗುವ ಪತ್ರಕರ್ತರ ಮಕ್ಕಳ ವಿದ್ಯಾಭ್ಯಾಸಕ್ಕೆ ಕನಿಷ್ಠ ಸಹಾಯ ಮಾಡುವ ಕಾರ್ಯಕ್ಕೆ ಬಳಸಲಾಗುತ್ತಿದೆ ಎಂದರು.
ಈ ದಿನದ ಸಭೆಯಲ್ಲಿ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕು ಘಟಕದ ನೂತನ ಸಮಿತಿಯನ್ನು ರಚಿಸಲಾಯಿತು ಪತ್ರಕರ್ತರ ಒಮ್ಮತದ ಮೇರೆಗೆ ಮೊದಲಿಗೆ ಹನೂರು ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಬಂಗಾರಪ್ಪ ಸಿ ಪೊನ್ನಾಚಿ,ಉಪಾಧ್ಯಕ್ಷರಾಗಿ ಸತೀಶ್ ಕುಮಾರ್ ಕೆ,ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜು ಕಾಂಚಳ್ಳಿ,ಸಂಘಟನೆ ಕಾರ್ಯದರ್ಶಿಯಾಗಿ ಶಾರುಖ್ ಖಾನ್,
ಖಜಾಂಚಿಯಾಗಿ ಚೇತನ್ ಕುಮಾರ್ ಎಲ್ ಮತ್ತು ನಿರ್ದೇಶಕರುಗಳು ಸೇರಿದಂತೆ ಸದಸ್ಯರುಗಳಾಗಿ ಅಜೀತ್ ಕುಮಾರ್,ರವಿಕುಮಾರ್,ನಾಗೇಂದ್ರ ತೆಳ್ಳನೂರು,ಪ್ರಸನ್ನ ಕುಮಾರ್,ವಿಜಯಕುಮಾರ್,ವೀಲಿಯಮ್ಸ್ ದೇವದಾಸ್,ಉಸ್ಮಾನ್ ಖಾನ್,
ಇವರನ್ನು ಕರ್ನಾಟಕ ಪತ್ರಕರ್ತರ ಸಂಘಕ್ಕೆ
ಸರ್ವ ಸದಸ್ಯರ ಒಮ್ಮತದ ಅಭಿಪ್ರಾಯದಂತೆ ಆಯ್ಕೆ ಮಾಡಲಾಯಿತು ಈ ಸಭೆಯಲ್ಲಿ ಎಲ್ಲರೂ ಒಕ್ಕೊರಲಿನ ಸಹಮತ ವ್ಯಕ್ತಪಡಿಸಿದರು.
ವರದಿ-ಉಸ್ಮಾನ್ ಖಾನ್

error: No Copying!