Spread the love

ಉಡುಪಿ: ದಿನಾಂಕ:13-07-2023(ಹಾಯ್ ಉಡುಪಿ ನ್ಯೂಸ್)

ನಗರದ ಶ್ರೀ ಕ್ರಿಷ್ಣ ಮಠದ ಸುತ್ತಲಿನ ಪರಿಸರದಲ್ಲಿ 14 ವರ್ಷದ ಶಾಲಾ ಬಾಲಕಿ ಯನ್ನು ಉತ್ತರ ಕರ್ನಾಟಕದ ಕೂಲಿ ಕಾರ್ಮಿಕನೋರ್ವ ಅತ್ಯಾಚಾರ ನಡೆಸಿರುವ ಪ್ರಕರಣ ನಡೆದಿದೆ ಎಂದು ಸಾರ್ವಜನಿಕ ಸುದ್ದಿಯೊಂದು ಹರಡಿದೆ.

ಶಾಲಾ ಬಾಲಕಿಯೋರ್ವಳನ್ನು ಅನಾರೋಗ್ಯದ ಕಾರಣಕ್ಕಾಗಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಹೆತ್ತವರು ಕರೆದೊಯ್ದಾಗ ಪರೀಕ್ಷಿಸಿದ ವೈದ್ಯರು ಬಾಲಕಿ ಗರ್ಭಿಣಿ ಯಾಗಿರುವ ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಗಾಬರಿಗೊಂಡ ಹೆತ್ತವರು ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದರು ಎನ್ನಲಾಗಿದ್ದು,ಆದರೆ ಸರ್ಕಾರಿ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ.

ಅಪ್ರಾಪ್ತ ಶಾಲಾ ಬಾಲಕಿ ಯನ್ನು ಕೂಲಿ ಕಾರ್ಮಿಕ ಯುವಕ ನೋರ್ವ ಅತ್ಯಾಚಾರ ನಡೆಸಿದ್ದು ;ಬಾಲಕಿ ಈ ಬಗ್ಗೆ ಹೆತ್ತವರ ಗಮನಕ್ಕೆ ತಂದಿಲ್ಲ ಎನ್ನಲಾಗಿದೆ.

ಸಾರ್ವಜನಿಕ ವಲಯದಲ್ಲಿ ಸುದ್ದಿ ಯಲ್ಲಿರುವ ಈ ಪ್ರಕರಣ ನೈಜವಾಗಿದ್ದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿ ಆರೋಪಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕಿದೆ

error: No Copying!