Spread the love

ಬ್ರಹ್ಮಾವರ: ದಿನಾಂಕ:04-07-2023(ಹಾಯ್ ಉಡುಪಿ ನ್ಯೂಸ್) ಕೊಕ್ಕರ್ಣೆ,ರಾಜೀವ ನಗರದ ನಿವಾಸಿ ವಿವಾಹಿತ ಮಹಿಳೆ ಓರ್ವಳಿಗೆ ಅವಳ ಗಂಡನ ಮನೆಯವರು ಮನೆ ಬಿಟ್ಟು ಹೋಗುವಂತೆ ದೈಹಿಕ ಹಲ್ಲೆ ನಡೆಸಿ ತನ್ನ ಗಂಡನಿಗೆ ಇನ್ನೊಂದು ಮದುವೆಗೆ ಸಿದ್ಧತೆ ನಡೆಸಿದ್ದಾರೆ ಎಂದು ಆರೋಪಿಸಿ ಹಲ್ಲೆ ಗೊಳಗಾದ ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

ಶೃತಿ ರೈ , (37 ವರ್ಷ) ಎಂಬವರು ಕೊಕ್ಕರ್ಣೆ ,ರಾಜೀವ ನಗರದ 5 ಸೆಂಟ್ಸ್ ನಲ್ಲಿ ತನ್ನ ಗಂಡ ಸುರೇಶ್ ಎಂಬವರ ಮನೆಯಲ್ಲಿ ವಾಸವಾಗಿದ್ದು,  ದಿನಾಂಕ: 02/07/2023 ರಂದು ಬೆಳಿಗ್ಗೆ 9:30 ಗಂಟೆಗೆ ತನ್ನ ಮನೆಯ ಮೆಟ್ಟಲಿನಿಂದ ಮನೆಯ ಒಳಗೆ ಸ್ನಾನಕ್ಕೆ ಹೋಗುವ ಸಮಯ ಅವರ ಗಂಡನ ಸಂಬಂಧಿಕರಾದ ವಿಜಯಲಕ್ಷ್ಮೀ, ರಜನಿ, ಪೂಣೆಶ, ಶ್ರೀಲತಾ,  ಕುಸುಮ ಎಂಬವರುಗಳು ಮನೆಗೆ ಬಂದು ಶ್ರತಿ ರೈ ರವರನ್ನು ಅಡ್ಡಗಟ್ಟಿ ನಿಲ್ಲಿಸಿ, ಶ್ರತಿ ರೈ ರವರನ್ನು ಉದ್ದೇಶಿಸಿ ನೀನು ಮನೆ ಬಿಟ್ಟು  ಬಾಡಿಗೆ ಮನೆಗೆ ಹೋದವಳು ಯಾಕೆ ವಾಪಾಸ್ಸು ಬಂದಿದ್ದೀಯಾ ಎಂದು ಹೇಳಿ, ವಿಜಯಲಕ್ಷ್ಮೀ ಯು ಶ್ರತಿ ರೈಯ ಕೆನ್ನೆಗೆ  ಕೈಯಿಂದ ಹೊಡೆದಿದ್ದು,  ಅದೇ ಸಮಯ  ಕೈ ಹಿಡಿದು ನೆಲಕ್ಕೆ ದೂಡಿ ಹಾಕಿರುತ್ತಾರೆ, ಆಗ ಪೂರ್ಣೇಶನು ಶ್ರತಿ ರೈ ರವರ  ಹೊಟ್ಟೆಯ ಕೆಳ ಭಾಗಕ್ಕೆ ಕಾಲಿನಿಂದ ತುಳಿದಿರುತ್ತಾನೆ. ರಜನಿ, ಶ್ರೀಲತಾ, ಕುಸುಮ ಇವರೆಲ್ಲ ಸೇರಿ ಶ್ರತಿ ರೈ ರವರಿಗೆ ಕೈಯಿಂದ ಹೊಡೆದಿರುತ್ತಾರೆ. ಅಲ್ಲದೇ ಶ್ರತಿ ರೈ ರವರು ಅವರಿಂದ ತಪ್ಪಿಸಿಕೊಂಡು ಮನೆಯಿಂದ ಕೊಕ್ಕರ್ಣೆ ಪೇಟೆ ಕಡೆಗೆ ಹೋಗುವಾಗ  ಆರೋಪಿಗಳು  ಶ್ರತಿ ರೈ ರವರನ್ನು ಹಿಂಬಾಲಿಸಿಕೊಂಡು ಬಂದು ಕೊಕ್ಕರ್ಣೆ ಪೇಟೆಯಲ್ಲಿ  ಸಾರ್ವಜನಿಕ ಸ್ಥಳದಲ್ಲಿ ಕೈಯಿಂದ ಹೊಡೆದು ಹಲ್ಲೆ ಮಾಡಿರುತ್ತಾರೆ. ಈ ಹಲ್ಲೆಯಿಂದ   ಶ್ರತಿ ರೈ ರವರ ಮುಖದ ಬಳಿ ತರಚಿದ ರಕ್ತಗಾಯ,  ಒಳ ಭುಜ ಹಾಗೂ ಹೊಟ್ಟೆಯ ಕೆಳಗೆ ಗುದ್ದಿದ ಒಳ ನೋವುಂಟಾಗಿರುತ್ತದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. 

ಶ್ರತಿ ರೈ ರವರ ಗಂಡ ಸುರೇಶ ರವರಿಗೆ ಅವರ ಸಂಬಂಧಿ ಆರೋಪಿತೆ ವಿಜಯಲಕ್ಷ್ಮೀ ಯವರನ್ನು ಗೊತ್ತು ಮಾಡಿದ್ದು, ಅಲ್ಲದೇ ಆರೋಪಿಗಳೆಲ್ಲರ ಇಚ್ಚೆಗೆ‍ ವಿರುದ್ಧವಾಗಿ ಶ್ರತಿ ರೈರವರು ಗಂಡ ಸುರೇಶ ರವರನ್ನು ಮದುವೆ ಆಗಿರುವುದರಿಂದ ಆರೋಪಿಗಳೆಲ್ಲರೂ ಸೇರಿ ಶ್ರತಿ ರೈ ರವರ ಮೇಲೆ ಹಲ್ಲೆ ನಡೆಸಿರುತ್ತಾರೆ ಎಂದು ಶ್ರತಿ ರೈಯವರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಕಲಂ 341, 323, 354, 504 R/W 34  IPC ಯಂತೆ ಪ್ರಕರಣ ದಾಖಲಾಗಿದೆ.  

error: No Copying!