Spread the love

ಇಂದು (21/06/2023) ಯೋಗ ದಿನ ಮಾತ್ರವಲ್ಲ, ಮಕ್ಕಳ ಹಕ್ಕುಗಳ ದಿನ ಕೂಡಾ ಹೌದು.

ಆದರೆ, ಬಹುತೇಕ ಜನರು ಯೋಗ ದಿನದ ಬಗೆಗಿನ ಪೋಸ್ಟ್ ಗಳನ್ನು ಮಾತ್ರ ಸ್ಟೇಟಸ್, ಡಿಪಿಗೆ ಮತ್ತು ಗ್ರೂಪ್ ಗಳಿಗೆ ಫೋರ್ ವರ್ಡ್ ಮಾಡಿದ್ದಾರೆ, ಮಾಡುತ್ತಿದ್ದಾರೆ.

ಇದಕ್ಕೆ ಹೇಳುವುದು ಸೋಗಲಾಡಿತನ ಎಂದು.

ಇಂದು ನಾವೆಲ್ಲರೂ ಅತೀ ಹೆಚ್ಚು ಆಸಕ್ತಿ, ಕಾಳಜಿ ತೋರಿಸಬೇಕಾದ್ದು ಮಕ್ಕಳ ಹಕ್ಕುಗಳ ಬಗ್ಗೆ. ಮಕ್ಕಳ ಕಷ್ಟ, ನಷ್ಟ, ಸಮಸ್ಯೆ, ನೋವು, ಅವರ ಮಾನಸಿಕತೆಯ ಬಗ್ಗೆ.

ಮಕ್ಕಳ ಆತ್ಮಹತ್ಯೆ ಹೆಚ್ಚಾಗಿದೆ. ಬಾಲ ಕಾರ್ಮಿಕರ ಸಂಖ್ಯೆಯಲ್ಲಿ ಕಡಿಮೆಯೇನೂ ಆಗಿಲ್ಲ. ವಿವಿಧ ಕಾರಣಗಳಿಂದಾಗಿ ಶಾಲೆಯಿಂದ ಹೊರಗುಳಿದವರು ಹಲವರು. ಅಪ್ರಾಪ್ತ ಹುಡುಗಿಯರ ಮೇಲೆ ಅತ್ಯಾಚಾರ, ಕೊಲೆ ನಡೆಯುತ್ತಿದೆ, ಪ್ರೀತಿ ಪ್ರೇಮಕ್ಕೆ ಬಲಿಯಾಗಿ ಇದೇ ಹಿನ್ನೆಲೆಯಲ್ಲಿ ಕೊಲೆಯಾಗುತ್ತಿದ್ದಾರೆ. ಮಾದಕ ದ್ರವ್ಯ ಸೇವನೆಯ ಚಟಕ್ಕೂ ಬಲಿಯಾಗಿ ಸುಂದರ ಭವಿಷ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಅಪರಾಧ ಪ್ರಕರಣಗಳಲ್ಲೂ, ಕ್ರಿಮಿನಲ್ ಕೃತ್ಯಗಳಲ್ಲೂ ಅಪ್ರಾಪ್ತ ಹುಡುಗರು ತೊಡಗಿಕೊಂಡಿದ್ದಾರೆ.

ಇಂಥ ಗಂಭೀರ ವಿಷಯಗಳ ಬಗ್ಗೆ ಸಮಾಜದ ಸರ್ವರೂ ಇದೀಗ ತುರ್ತಾಗಿ ಚಿಂತನ ಮಂಥನ, ಜನಜಾಗೃತಿ ನಡೆಸುವ ಅಗತ್ಯ ಇದೆ. ಆದ್ಧರಿಂದ ಮಕ್ಕಳ (ಒಂದರಿಂದ ಪದವಿ ವರೆಗಿನ ಮಕ್ಕಳ) ಹಕ್ಕುಗಳ ಬಗ್ಗೆ ಮತ್ತು ಮಕ್ಕಳನ್ನು ಪ್ರಭಾವಿಸುತ್ತಿರುವ ವಿವಿಧ ವಿಷಯಗಳು, ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳ ಸಹಿತ ಸಮಾಜದ ಎಲ್ಲಾ ಪ್ರಜ್ಞಾವಂತರು, ಪ್ರಬುದ್ಧ ಜನತೆ ಮೊದಲ ಆದ್ಯತೆಯಲ್ಲಿ ಯಥಾಸಾಧ್ಯ ಗಮನಹರಿಸಿ ಕೆಲಸಮಾಡಬೇಕಾಗಿದೆ.

ಇಂದಿನ ಮಕ್ಕಳೆ ದೇಶದ ಮುಂದಿನ ಭವಿಷ್ಯ.

~ ಶ್ರೀರಾಮ ದಿವಾಣ, ಮೂಡುಬೆಳ್ಳೆ, ಉಡುಪಿ.

error: No Copying!