ಭುವನೇಶ್ವರ: ದಿನಾಂಕ:04-06-2023 (ಹಾಯ್ ಉಡುಪಿ ನ್ಯೂಸ್) ಕೇಂದ್ರ ಆರೋಗ್ಯ ಸಚಿವ ಮನ್ ಸುಖ್ ಮಾಂಡವಿಯಾ ಭಾನುವಾರ ಭುವನೇಶ್ವರದ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ.
ವಿಮಾನ ನಿಲ್ದಾಣದಿಂದ ಭುವನೇಶ್ವರದ ಏಮ್ಸ್ ಮತ್ತು ಕಟಕ್ ನ ವೈದ್ಯಕೀಯ ಕಾಲೇಜಿಗೆ ಕೇಂದ್ರ ಆರೋಗ್ಯ ಸಚಿವ ಮನ್ ಸುಖ್ ಮಾಂಡವಿಯಾ ಭೇಟಿ ನೀಡಲಿದ್ದಾರೆ.
ಒಡಿಶಾದ ಬಾಲಸೋರ್ ನ ತ್ರಿವಳಿ ರೈಲು ದುರಂತದಲ್ಲಿ ಗಾಯಗೊಂಡ ಗಾಯಾಳು ಸಂಸ್ರಸ್ಥರಿಗೆ ನೀಡಲಾಗುತ್ತಿರುವ ವೈದ್ಯಕೀಯ ನೆರವನ್ನು ಪರಿಶೀಲನೆ ನಡೆಸಲು ಕೇಂದ್ರ ಆರೋಗ್ಯ ಸಚಿವರು ಭುವನೇಶ್ವರಕ್ಕೆ ಭೇಟಿ ನೀಡಿದ್ದಾರೆ.
ರೈಲು ದುರಂತದಲ್ಲಿ 288 ಪ್ರಯಾಣಿಕರು ಮ್ರತಪಟ್ಟಿದ್ದು ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ.