ಕಾಪು: ದಿನಾಂಕ:3-06-2023 (ಹಾಯ್ ಉಡುಪಿ ನ್ಯೂಸ್) ಉದ್ಯಾವರ ಗ್ರಾಮದ ಅಶೋಕ್ ಎಂಬವರು ಕಾಣೆಯಾಗಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉದ್ಯಾವರ ಗ್ರಾಮ , ಗಣೇಶ ನಗರ ನಿವಾಸಿ ವರುಣ್ (28) ಎಂಬವರ ಮಾವ ಅಶೋಕ ( 47 ) ಎಂಬವರು ದಿನಾಂಕ 01/06/2023 ರಂದು ವೆಲ್ಡಿಂಗ್ ಕೆಲಸ ಮುಗಿಸಿ ಮನೆಗೆ ಬಂದಿದ್ದು. ಸಂಜೆ 5:30 ಗಂಟೆಗೆ ಉದ್ಯಾವರ ಪೇಟೆಗೆ ಹೋಗಿ ಬರುತ್ತೇನೆಂದು ಸ್ವರೂಪ ಎಂಬುವವರ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಹೋದವರು ಮನೆಗೆ ವಾಪಾಸ್ಸು ಬಂದಿರುವುದಿಲ್ಲ. ಅಲ್ಲದೇ ನೆರೆಕೆರೆಯವರನ್ನು ಹಾಗೂ ಸಂಬಂಧಿಕರನ್ನು ವಿಚಾರಿಸಿದಲ್ಲಿ ಅಲ್ಲಿಗೂ ಹೋಗದೇ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.