ಕೋಟ: ದಿನಾಂಕ 29/05/2023(ಹಾಯ್ ಉಡುಪಿ ನ್ಯೂಸ್) ಸಾಸ್ತಾನ ಗೋಳಿ ಗರಡಿ ಪರಿಸರದಲ್ಲಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ವ್ಯಕ್ತಿಯನ್ನು ಕೋಟ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕೋಟ ಪೊಲೀಸ್ ಠಾಣೆಯ ಪಿಎಸ್ಐ (ತನಿಖೆ) ಯವರಾದ ನರೇಂದ್ರರವರು ದಿನಾಂಕ:27-05-2023ರಂದು ಸಿಬ್ಬಂದಿಯವರೊಂದಿಗೆ ಇಲಾಖಾ ಜೀಪಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಬ್ರಹ್ಮಾವರ ತಾಲೂಕು ಪಾಂಡೇಶ್ವರ ಗ್ರಾಮದ ಸಾಸ್ತಾನ ಗೋಳಿಗರಡಿ ರಸ್ತೆಯಲ್ಲಿರುವ ಗೂಡು ಅಂಗಡಿಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೊರೆತ ಖಚಿತ ಮಾಹಿತಿಯ ಮೇರೆಗೆ ಕೂಡಲೇ ಧಾಳಿ ನಡೆಸಿ ಮಟ್ಕಾ ಜುಗಾರಿ ಆಟದಲ್ಲಿ ನಿರತನಾಗಿದ್ದ ಆರೋಪಿ ಮಹಾಬಲ ಪೂಜಾರಿ ಎಂಬಾತನನ್ನು ಪೊಲೀಸರು ಸುತ್ತುವರಿದು ಹಿಡಿದು ವಿಚಾರಿಸಿದಾಗ ಆತನ ಕೈಯಲ್ಲಿ ಮಟ್ಕಾ ಚೀಟಿ ಮತ್ತು ಬಾಲ್ ಪೆನ್ ಇದ್ದು ಅವುಗಳಲ್ಲಿ ಸಂಖ್ಯೆಗಳನ್ನು ಬರೆದಿದ್ದು ತನ್ನ ಸ್ವಂತ ಲಾಭಕ್ಕಾಗಿ ಸದ್ರಿ ಸಂಖ್ಯೆಗಳ ಮೇಲೆ ಹಣವನ್ನು ಸಾರ್ವಜನಿಕರಿಂದ ಪಡೆದು ಮಟ್ಕಾ ಜುಗಾರಿ ಆಟ ಆಡಿಸುತ್ತಿದ್ದಿರುವುದಾಗಿ ಪೊಲೀಸರಿಗೆ ತಿಳಿಸಿರುತ್ತಾನೆ ಎನ್ನಲಾಗಿದೆ. ಆರೋಪಿಯನ್ನು ಹಾಗೂ ಆತನ ಶರ್ಟ್ ಕಿಸೆಯಲ್ಲಿ ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ಮಟ್ಕಾ ಚೀಟಿ, ಬಾಲ್ ಪೆನ್ ಮತ್ತು ನಗದು ಒಟ್ಟು ಮೌಲ್ಯ 2,450/-ರೂಪಾಯಿ ಹಣವನ್ನು ಪೊಲೀಸರು ಸ್ವಾಧಿನಪಡಿಸಿಕೊಂಡಿದ್ದು , ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಕಲಂ: 78(1)(3) KP ACT ನಂತೆ ಪ್ರಕರಣ ದಾಖಲಾಗಿದೆ.