Spread the love

ಮಣಿಪಾಲ: ದಿನಾಂಕ:28-05-2023(ಹಾಯ್ ಉಡುಪಿ ನ್ಯೂಸ್) ಮಣಿಪಾಲ ಬಳಿಯ ಅರ್ಬಿ ಪಾಲ್ಸ್ ಎಂಬಲ್ಲಿ ಕುಳಿತಿದ್ದ ಇಬ್ಬರನ್ನು ತಾವು ಪೊಲೀಸ್ ಅಧಿಕಾರಿಗಳೆಂದು ಬೆದರಿಸಿ ಹಣ ವಸೂಲಿ ಮಾಡಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟಕಲ್‌, ಶಿರ್ವಾ ನಿವಾಸಿ ಮಂಜುನಾಥ ಆರ್ ಎನ್ (24 ವರ್ಷ) ಎಂಬವರು ದಿನಾಂಕ: 26-05-2023ರಂದು ಉಡುಪಿ ತಾಲೂಕು 80 ಬಡಗಬೆಟ್ಟು ಗ್ರಾಮದ ಅರ್ಬಿ ಪಾಲ್ಸ್ ಎಂಬಲ್ಲಿ ತನ್ನ ಗೆಳತಿಯೊಂದಿಗೆ ಕುಳಿತು ಮಾತನಾಡುತ್ತಿರುವ ಸಮಯ ಅವರ ಹತ್ತಿರಕ್ಕೆ ಬಂದ ಹನುಮಂತಪ್ಪ ಮಹಾದೇವಪ್ಪ ಎಂಬವನು ಮಂಜುನಾಥರನ್ನು ಉದ್ದೇಶಿಸಿ ತಾನು ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್‌, ನೀವು ಯಾಕೆ ಇಲ್ಲಿ ಕುಳಿತಿದ್ದೀರಿ ? ನಿಮ್ಮ ಮೇಲೆ ಕೇಸ್‌ಮಾಡುತ್ತೇನೆ ಎಂದು ಹೇಳಿ ಬೆದರಿಸಿ ಮಣಿಪಾಲ ಪೊಲೀಸ್‌ಠಾಣೆಯ ಎಸ್‌ಐ ರವರಿಗೆ ಫೋನ್‌ಮಾಡುತ್ತೇನೆ ಅವರು ಹೇಳಿದರೆ ಬಿಡುತ್ತೇನೆ ಎಂದು ಹೇಳಿ ಇನ್ನೋರ್ವ ಲಕ್ಷ್ಮಣ ಕುಪ್ಪಗೊಂಡ ಎಂಬುವವನಿಗೆ ಫೋನ್‌ಮಾಡಿ ಲೌಡ್‌ಸ್ಪೀಕರ್ ಇಟ್ಟು ಮಾತನಾಡಿದ್ದು , ಆ ಸಮಯ ತಾನು ಮಣಿಪಾಲ ಪೊಲೀಸ್‌ ಠಾಣೆಯ ಎಸ್‌ಐ ಮಾತನಾಡುತ್ತಿದ್ದೇನೆ, 5 ಸಾವಿರ ರೂಪಾಯಿ ಅವರಿಗೆ ಕೊಡು ಇಲ್ಲವಾದರೆ ಜೀಪು ಕಳಿಸಿ ಪೊಲೀಸ್‌ ಠಾಣೆಗೆ ಕರೆಸಿಕೊಳ್ಳುತ್ತೇನೆ ಎಂದು ಆ ಕಡೆಯಿಂದ ಫೋನಿನಲ್ಲಿ ಬೆದರಿಸಿದ್ದು ಮೊಬೈಲ್‌ಮೂಲಕ ಹನುಮಂತಪ್ಪ ಮಹಾದೇವಪ್ಪ ರವರ ಮೊಬೈಲ್‌ನಂಬರ್ 9620059314 ರಿಗೆ ರೂಪಾಯಿ 5 ಸಾವಿರವನ್ನು ವರ್ಗಾಯಿಸಿಕೊಂಡಿದ್ದು , ಇಬ್ಬರು ಆಪಾದಿತರು ಪೊಲೀಸ್‌ ಅಧಿಕಾರಿಗಳಲ್ಲದಿದ್ದರೂ , ತಾವುಗಳು ಪೊಲೀಸ್‌ ಅಧಿಕಾರಿಗಳೆಂದು ನಟಿಸಿ ಮಂಜುನಾಥ ಆರ್ ಎನ್ ರಿಂದ ಬಲವಂತವಾಗಿ ರೂಪಾಯಿ 5 ಸಾವಿರ ಹಣವನ್ನು ಪಡೆದುಕೊಂಡಿರುತ್ತಾರೆ ಎಂದು ಮಣಿಪಾಲ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ  ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ: 170, 419, 384 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.

error: No Copying!