- ಉಡುಪಿ: ದಿನಾಂಕ:20-05-2023(ಹಾಯ್ ಉಡುಪಿ ನ್ಯೂಸ್) ಆನ್ಲೈನ್ ನಲ್ಲಿ ಎಲೆಕ್ಟ್ರಿಕಲ್ ಸ್ಕೂಟರ್ ಖರೀದಿಸಲು ಹೋಗಿ 69,439 ರೂಪಾಯಿಯನ್ನು ವಂಚನೆಗೊಳಗಾಗಿ ಕಳೆದುಕೊಂಡಿರುವುದಾಗಿ ವ್ಯಕ್ತಿ ಯೋರ್ವರು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
- ರಾಜೇಶ್ ಅಮೀನ್ ಎಂಬವರು ದಿನಾಂಕ 11/05/2023 ರಂದು ಸ್ಕೂಟರ್ ಖರೀಧಿಸುವ ಬಗ್ಗೆ ಆನ್‌ಲೈನ್ ನಲ್ಲಿ ಹುಡುಕಾಡುತ್ತಿದ್ದಾಗ, OLA Electrical Mobility Prv.ltd ಎಂಬ ವೆಬ್‌ಸೈಟ್ ನಲ್ಲಿ ಕಂಡು ಬಂದ ಮೊಬೈಲ್ ನಂಬ್ರಕ್ಕೆ ಸಂಪರ್ಕಿಸಿದಾಗ ಆತನು ಮುಂಗಡ ಹಣ ಪಾವತಿಸುವಂತೆ ಬ್ಯಾಂಕ್ ಖಾತೆ ನಂಬ್ರ ನೀಡಿದ್ದು, ರಾಜೇಶ್ ಅಮೀನ್ ಆತನನ್ನು ನಂಬಿ ಸ್ಕೂಟರ್ ಖರೀದಿಸುವ ಬಗ್ಗೆ ರೂಪಾಯಿ 30,000/-, 38,940/- ಮತ್ತು ರೂಪಾಯಿ 499/- ರಂತೆ ಒಟ್ಟು ರೂಪಾಯಿ 69,439/- ಹಣವನ್ನು ಆನ್ ಲೈನ್ ಮುಖೇನ ಆತನ ಖಾತೆಗೆ ವರ್ಗಾವಣೆ ಮಾಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಯಾರೋ ಅಪರಿಚಿತ ವ್ಯಕ್ತಿ OLA Electrical Mobility Prv.ltd ಎಂಬ ಕಂಪೆನಿಯವನೆಂದು ಹೇಳಿ, ಸ್ಕೂಟರ್ ನೀಡುವುದಾಗಿ ರಾಜೇಶ್ ಅಮೀನ್ ರನ್ನು ನಂಬಿಸಿ, ಅವರಿಂದ ಒಟ್ಟು ರೂಪಾಯಿ 69,439/- ಹಣವನ್ನು ಪಡೆದು ಸ್ಕೂಟರ್ ನೀಡದೇ ಪಡೆದ ಹಣವನ್ನು ವಾಪಾಸು ನೀಡದೇ ಮೋಸ ಮಾಡಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
- . ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ. ಕಲಂ: 66(C), 66(D) ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿದೆ .