Spread the love
  • ಮಣಿಪಾಲ: ದಿನಾಂಕ:19-05-2023(ಹಾಯ್ ಉಡುಪಿ ನ್ಯೂಸ್) ಶಿವಳ್ಳಿ ಗ್ರಾಮದ ನಿವಾಸಿಯೋರ್ವರು ಮನೆಗೆ ಬಾರದೆ ಕಾಣೆಯಾಗಿರುವ ಬಗ್ಗೆ ಅವರ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.
  • ಗೀತಾ ಡಿ ಶೆಟ್ಟಿ  ( 73 ) ಎಂಬವರು ಗಂಡ: ದಿನಕರ ಶೆಟ್ಟಿ, ಮನೆ ನಂಬರ್ 301, 3 ನೆ ಮಹಡಿ ನಿರ್ಮಾಣ್ ಶೆಲ್ಟರ್ ಅಪಾರ್ಟಮೆಂಟ್ ವಿದ್ಯಾರತ್ನನಗರ ಶಿವಳ್ಳಿ ಗ್ರಾಮ, ಮಣಿಪಾಲ, ಉಡುಪಿ ಎಂಬಲ್ಲಿ ವಾಸವಾಗಿದ್ದು ಅವರ  ಗಂಡ ದಿನಕರ ಶೆಟ್ಟಿ (73) ಅವರು 2 ವರ್ಷದಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ ಎನ್ನಲಾಗಿದೆ. ಗೀತಾ.ಡಿ.ಶೆಟ್ಟಿಯವರ ಗಂಡ ದಿನಕರ ಶೆಟ್ಟಿ ರವರು ದಿನಾಂಕ 14/05/2023 ರಂದು ಸಂಜೆ   ಮುದರಂಗಡಿ ಸಮೀಪ ಇರುವ ಸಾಂತೂರು ಎಂಬಲ್ಲಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆಯಿಂದ ಹೋದವರು ಸಾಂತೂರಿಗೆ ಹೋಗದೆ ವಾಪಾಸು ಮನೆಗೂ ಬಾರದೆ ಕಾಣೆಯಾಗಿರುತ್ತಾರೆ ಎಂದು ಗೀತಾ.ಡಿ.ಶೆಟ್ಟಿಯವರು ಪೊಲೀಸರಿಗೆ ದೂರು ನೀಡಿದ್ದಾರೆ
  • . ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿದೆ .
error: No Copying!