Spread the love

ಮಣಿಪಾಲ: ದಿನಾಂಕ :17/05/2023 (ಹಾಯ್ ಉಡುಪಿ ನ್ಯೂಸ್) ಮಗನೋರ್ವ ಆಸ್ತಿಗಾಗಿ ಹೆಂಡತಿಯೊಂದಿಗೆ ಸೇರಿಕೊಂಡು ತನ್ನ ತಾಯಿಗೆ ಗಂಭೀರ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.     

ಲೀಲಾವತಿ (55 ), ಗಂಡ : ದಿ. ಸದಾಶಿವ ಆಚಾರ್ಯ, ಎಂಬವರು ಉಡುಪಿಯ ,ಪೆರಂಪಳ್ಳಿ  ಅರುಣ ಫಾರ್ಮ್ ಹತ್ತಿರದ ನಿವಾಸಿಯಾಗಿದ್ದು  ಇವರು ದಿನಾಂಕ:14-05-2023 ರಂದು ಸಂಜೆ ತಮ್ಮ ಮನೆಯಲ್ಲಿರುವಾಗ ಅವರ ಮಗ ಕಿರಣ ತನ್ನ ಹೆಂಡತಿ ಗೀತಾ ಹಾಗೂ ಮಕ್ಕಳೊಂದಿಗೆ ಚಿಕ್ಕಮಗಳೂರಿನಿಂದ ಲೀಲಾವತಿ ಯವರ  ಮನೆಗೆ ಬಂದಿದ್ದು,  ಕಿರಣನು ರಾತ್ರಿ 08:00 ಗಂಟೆಗೆ  ಲೀಲಾವತಿಯವರಿಗೆ   ಅವಾಚ್ಯ ಶಬ್ದಗಳಿಂದ ಬೈದು ಮನೆಯಲ್ಲಿದ್ದ ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು, ಜಾಗ ಮತ್ತು ಮನೆ ನನಗೆ ಸೇರಿದ್ದು ನೀನು ಇಲ್ಲಿ ಇರಬಾರದು ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾನೆ ಎಂದು ಲೀಲಾವತಿ ದೂರಿದ್ದಾರೆ    

ಅಲ್ಲದೇ ಮಗ ಕಿರಣ ನ ಹೆಂಡತಿ ಗೀತಾ  ಲೀಲಾವತಿ ಯವರ ಸೊಂಟಕ್ಕೆ ಕಾಲಿನಿಂದ ತುಳಿದಿರುತ್ತಾಳೆ ಎಂದಿದ್ದಾರೆ,  ಕಿರಣನು ತಾಯಿ ಲೀಲಾವತಿಯವರಿಗೆ ಕೈ ಯಿಂದ ಬಲ ದವಡೆಗೆ ಬಲವಾಗಿ ಹೊಡೆದಿದ್ದು  ಲೀಲಾವತಿಯವರು ಜೋರಾಗಿ ಬೊಬ್ಬೆ  ಹಾಕಿದ್ದು ತಲೆಯಿಂದ ರಕ್ತ ಸುರಿಯುತ್ತಿತ್ತು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ದೂರಿದ್ದಾರೆ. ಚಿಕಿತ್ಸೆಯ ಬಗ್ಗೆ ಮರುದಿನ ದಿನಾಂಕ 15/05/2023 ರಂದು ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಾಗಿರುತ್ತಾರೆ . ಲೀಲಾವತಿಯವರು ವಾಸವಿರುವ ಮನೆ ಹಾಗೂ ಜಾಗವನ್ನು ಆತನ ಹೆಸರಿಗೆ ಮಾಡಿಕೊಡಬೇಕೆಂಬ ಉದ್ದೇಶದಿಂದ ಗಲಾಟೆ ಮಾಡಿ  ಹೊಡೆದಿದ್ದಾರೆ ಎಂದು ಲೀಲಾವತಿಯವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಕಲಂ: 324, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ .

error: No Copying!