ಬೈಂದೂರು: ದಿನಾಂಕ :02/05/2023 (ಹಾಯ್ ಉಡುಪಿ ನ್ಯೂಸ್) ನಾಲ್ಕೈದು ಜನರ ಗುಂಪೊಂದು ಸೋಮೇಶ್ವರ ಬೀಚ್ ನಲ್ಲಿ ತಿರುಗಾಡುತ್ತಿದ್ದ ಯುವಕರಿಗೆ ಹಲ್ಲೆ ನಡೆಸಿರುವ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಜಯ್ ಎಂಬವರು ತನ್ನ ಸ್ನೇಹಿತರಾದ ಹರೀಶ್ ಮತ್ತು ನವೀನ ಎಂಬವರೊಂದಿಗೆ ದಿನಾಂಕ:2-05-2023 ರಂದು ಪಡುವರಿ ಗ್ರಾಮದ ಸೋಮೇಶ್ವರ ಬೀಚ್ ನಲ್ಲಿ ತಿರುಗಾಡುತ್ತಿರುವಾಗ ಸಂಜೆ ಸುಮಾರು 7:00 ಗಂಟೆಗೆ ಅವರ ಬಳಿಗೆ ನಾಲ್ಕೈದು ಜನರು ಬಂದು ಅವರ ಜೊತೆಗಿದ್ದ ಹರೀಶ್ ಎಂಬವನಲ್ಲಿ ನೀನೇನಾ ಹರೀಶ್ ಎಂದು ಕೇಳಿ ಶಿವರಾಜ್ ಮತ್ತು ನಾಗರಾಜ್ ಎಂಬವರು ಹರೀಶನಿಗೆ ಕೈಯಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ನಂತರ ಅಲ್ಲಿಯೇ ಪಕ್ಕದಲ್ಲಿದ್ದ ತೆಂಗಿನ ಮರದ ತೆಂಗಿನ ಹೆಡೆಮಡಿಯಿಂದ ಹರೀಶ್ ನಿಗೆ ಹೊಡೆದಿರುತ್ತಾರೆ ಎನ್ನಲಾಗಿದೆ. ಆ ಸಮಯ ಹರೀಶ ನಿಗೆ ಹೊಡೆಯದಂತೆ ಸಂಜಯ್ ಹಾಗೂ ನವೀನ್ ಹೋಗಿ ತಡೆದಿದ್ದು , ಹಲ್ಲೆಯಿಂದ ಗಾಯಗೊಂಡ ಹರೀಶ ನನ್ನು ಒಂದು ಕಾರಿನಲ್ಲಿ ಸಂಜಯ್ ಮತ್ತು ನವೀನ್ ರವರು ಕುಂದಾಪುರ ಚಿನ್ಮಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.