Spread the love

ಉಡುಪಿ: ದಿನಾಂಕ: 3-05-2023( ಹಾಯ್ ಉಡುಪಿ ನ್ಯೂಸ್) ಪ್ರಜಾಪ್ರಾತಿನಿಧ್ಯ ಕಾಯಿದೆ ಉಲ್ಲಂಘಿಸಿ ಕೈಪಿಡಿ ಗಳನ್ನು ಮುದ್ರಿಸಿ ಹಂಚಲು ದಾಸ್ತಾನು ಇರಿಸಿದ್ದ ಉಡುಪಿ ಅಂಬಲಪಾಡಿ ಯ ಕಾನ್ಸೆಪ್ಟ್ ಕಾರ್ಸ್ .ಹೆಸರಿನ ಅಂಗಡಿಗೆ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗೌತಮ್ ಶಾಸ್ತ್ರಿ.ಹೆಚ್, ಅಧಿಕಾರಿ, ಫ್ಲೈಯಿಂಗ್‌ ಸ್ಕ್ವ್ಯಾಡ್‌ ಟೀಮ್‌-2, 120-ಉಡುಪಿ ವಿಧಾನಸಭಾ ಕ್ಷೇತ್ರ, ಉಡುಪಿ ಇವರು 120-ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಫ್ಲೈಯಿಂಗ್‌ ಸ್ಕ್ವ್ಯಾಡ್‌ ಟೀಮ್‌-2 ರಲ್ಲಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ದಿನಾಂಕ 29/04/2023 ರಂದು ಗೌತಮ್‌ ಶಾಸ್ತ್ರಿ.ಹೆಚ್‌ ರವರು ಕರ್ತವ್ಯದಲ್ಲಿರುವಾಗ ಉಡುಪಿ ತಾಲೂಕು ಅಂಬಲ್ಪಾಡಿ ಗಾಂಧಿನಗರ ಎಂಬಲ್ಲಿ ರಾ.ಹೆ-66 ರ ಪೂರ್ವಬದಿಯಲ್ಲಿರುವ ಕಾನ್ಸೆಪ್ಟ್‌ ಕಾರ್ಸ್‌ ಎಂಬ ಹೆಸರಿನ ಅಂಗಡಿಯಲ್ಲಿ ಯಾವುದೇ ಪ್ರಕಾಶಕರ, ಮುದ್ರಿಸಿದವರ ಮತ್ತು ಮುದ್ರಿತ ಪ್ರತಿಗಳ ವಿವರಗಳಿರದ ಹಾಗೂ ನಿಯಮಾನುಸಾರ ಪ್ರಕಟಣೆ ಇಲ್ಲದಿರುವ ಕೈಪಿಡಿ ಪುಸ್ತಕಗಳನ್ನು ಹಂಚಿಕೆ ಮಾಡುವ ಸಲುವಾಗಿ ಸಂಗ್ರಹಿಸಿಟ್ಟಿರುವುದಾಗಿ ದೊರೆತ ಖಚಿತ ಮಾಹಿತಿಯಂತೆ ಅಧಿಕಾರಿಗಳು ಸ್ಥಳಕ್ಕೆ ತಲುಪಿ, ಅಂಗಡಿಯೊಳಗಿನ ಹಿಂಭಾಗದ ಕೋಣೆಯೊಂದರಲ್ಲಿ ರಟ್ಟಿನ ಬಾಕ್ಸ್‌ ಒಂದರಲ್ಲಿ ಬಿಜೆಪಿ ಪಕ್ಷದ ಚಿಹ್ನೆಯಾದ ಕಮಲದ ಹೂವಿನ ಉಲ್ಟಾ ಚಿತ್ರವಿರುವ ಒಟ್ಟು 24 ಪುಟಸಂಖ್ಯೆಯ ಒಟ್ಟು 1,500 ಪ್ರತಿಗಳಿದ್ದು, ಆ ಕೈಪಿಡಿಯಲ್ಲಿ ನಿಯಮಾನುಸಾರವಾಗಿ ಪ್ರಕಾಶಕರ, ಮುದ್ರಿಸಿದವರ ಮತ್ತು ಮುದ್ರಿತ ಪ್ರತಿಗಳ ವಿವರಗಳು ಇಲ್ಲದೆ ಇದ್ದು, ಪ್ರಜಾಪ್ರಾತಿನಿಧ್ಯ ಕಾಯಿದೆ ಕಲಂ: 27ಎ ಯನ್ನು ಉಲ್ಲಂಘಿಸಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಗೌತಮ್‌ ಶಾಸ್ತ್ರಿ.ಹೆಚ್‌ ರವರು ದಿನಾಂಕ 29/04/2023 ರಂದು ನಗರ ಠಾಣೆಯಲ್ಲಿ ದೂರು ನೀಡಿದ್ದು , ದಿನಾಂಕ 02/05/2023 ರಂದು ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಕಲಂ: 127A REPRESENTATION OF PEOPLES ACT 1951ರಂತೆ ಪ್ರಕರಣ ದಾಖಲಾಗಿದೆ.

error: No Copying!