Spread the love
  • ಬೈಂದೂರು: ದಿನಾಂಕ 21-04-2023(ಹಾಯ್ ಉಡುಪಿ ನ್ಯೂಸ್) ಸಮಾಜದಲ್ಲಿ ಶಾಂತಿ ಯನ್ನು ಕದಡುವ ಪೋಸ್ಟ ನ್ನು ಸಾಮಾಜಿಕ ಜಾಲತಾಣದಲ್ಲಿ ಹರಡಿರುವ ಬಗ್ಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ನೀಡಿದ ದೂರಿನಂತೆ ರಾಜೇಶ್ ಕೊಠಾರಿ ಎಂಬವನ ಮೇಲೆ ಪ್ರಕರಣ ದಾಖಲಾಗಿದೆ.
  • ವಿಶ್ವನಾಥ. ಎಂಬವರು  118 – ಬೈಂದೂರು ವಿಧಾನಸಭಾ ಕ್ಷೇತ್ರದ ಚುನಾವಣೆಯ ಎಫ್.ಎಸ್.ಟಿ -1 ನೇದರ ಅಧಿಕಾರಿಯಾಗಿದ್ದು, ಸಾಮಾಜಿಕ ಜಾಲತಾಣಗಳಾದ ಪೇಸ್ಬುಕ್ ಹಾಗೂ ವಾಟ್ಸಪ್ ದುರ್ಬಳಕೆ ಮಾಡಿಕೊಂಡು ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಬಗ್ಗೆ ಮೂರ್ತಿ ಬಿ.ಎಸ್ ಹಾಗೂ ರಂಜಿತ್ (ಕೆಪಿಸಿಸಿಎಲ್ ಲೀಗಲ್ ಸೆಲ್) ಎನ್ನುವವರು ಮಾನ್ಯ ಮುಖ್ಯ ಚುನಾವಣಾಧಿಕಾರಿ ಬೆಂಗಳೂರು ಇವರಿಗೆ ದೂರನ್ನು ನೀಡಿರುತ್ತಾರೆ.
  • ಚುನಾವಣಾಧಿಕಾರಿಗಳು 118-ಬೈಂದೂರು ವಿಧಾನಸಭಾ ಕ್ಷೇತ್ರ ರವರ ಆದೇಶದಂತೆ ದೂರು ನೀಡಿದ್ದು, ಗುರುರಾಜ್ ಗಂಟಿಹೊಳೆ ಬೈಂದೂರಿನ ಶಾಸಕರಾಗಲಿ ಎಂಬ ಹೆಸರಿನಲ್ಲಿರುವ ಪೇಸ್ಬುಕ್ ಖಾತೆಯಲ್ಲಿ   ಪೋಸ್ಟ್ ಇದ್ದು ಅದನ್ನು Rajesh Kotari ಎಂಬ ಫೇಸ್ಬುಕ್ ಖಾತೆಯನ್ನು ಹೊಂದಿದ ವ್ಯಕ್ತಿಯು ತನ್ನ ಫೇಸ್ಬುಕ್ ಖಾತೆಯ ಮೂಲಕ ಶೇರ್ ಮಾಡಿರುತ್ತಾನೆ ಎಂದು ದೂರಿದ್ದಾರೆ. ನವೀನ್ ಗಂಗೊಳ್ಳಿ  ಎಂಬ ಬರಹ ಇರುವ ಪೋಸ್ಟ್ ನ್ನು ಮೊಬೈಲ್ ನಲ್ಲಿ  ಶೇರ್ ಮಾಡಿ ಸಮಾಜದಲ್ಲಿ ವ್ಯಕ್ತಿಗಳ ಮಧ್ಯೆ ದ್ವೇಷ ಭಾವನೆ ಉಂಟು ಮಾಡಿ ಆ ಮೂಲಕ ಕಾನೂನು ವಿರುದ್ಧವಾದ ಯಾವುದೇ ಕೃತ್ಯವನ್ನು ಮಾಡುವ ಮೂಲಕ ಹಾಗೆ ಉದ್ರೇಕಿಸುವದರಿಂದ ಸಮಾಜದಲ್ಲಿ ದೊಂಬಿ ಉಂಟು ಮಾಡುವ ಕೃತ್ಯ ಮಾಡಿದ್ದು ಹಾಗೂ ಧರ್ಮದ ಹೆಸರಿನಲ್ಲಿ ಮತದಾರರನ್ನು ಎತ್ತಿಕಟ್ಟುವ ಮೂಲಕ ಸಮಾಜದಲ್ಲಿ ಶಾಂತಿಯನ್ನು ಕದಡುವ ಮತ್ತು ಸಾಮಾಜಿಕ ನೆಮ್ಮದಿಗೆ ಭಂಗವನ್ನುಂಟು ಮಾಡುವ ಮೂಲಕ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿರುತ್ತಾರೆ ಎಂದು ಚುನಾವಣಾ ಅಧಿಕಾರಿ ವಿಶ್ವನಾಥ ರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಕಲಂ: 153, 171(ಜಿ) IPC ಮತ್ತು ಕಲಂ 123(3), 125  Representation of People Act ರಂತೆ ಪ್ರಕರಣ ದಾಖಲಾಗಿದೆ.    
       
error: No Copying!