ಅಮಾಸೆಬೈಲು: ದಿನಾಂಕ:21-04-2023(ಹಾಯ್ ಉಡುಪಿ ನ್ಯೂಸ್) ಮಡಾಮಕ್ಕಿ ಗ್ರಾಮ ಪಂಚಾಯತ್ ಕಚೇರಿಗೆ ಬಂದ ವ್ಯಕ್ತಿ ಯೋರ್ವರು ಕಚೇರಿಯ ಮಹಿಳಾ ಸಿಬ್ಬಂದಿಗೆ ಬೆದರಿಸಿ ಕಚೇರಿಗೆ ಬೀಗ ಹಾಕಿ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭಾಸ್ಕರ ಶೆಟ್ಟಿ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಗ್ರಾಮ ಪಂಚಾಯತ್ ಮಡಾಮಕ್ಕಿಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಾದ ಕೆ.ಭಾಸ್ಕರ ಶೆಟ್ಟಿ ಅವರು ದಿನಾಂಕ 20/04/2023 ರಂದು ಹೆಬ್ರಿ ತಾಲೂಕು ಪಂಚಾಯತ್ ನ ಮಾನ್ಯ ಕಾರ್ಯ ನಿರ್ವಹಣಾಧಿಕಾರಿಯವರ ಸೂಚನೆಯ ಮೇರೆಗೆ ಕ್ಷೇತ್ರ ಕರ್ತವ್ಯಕ್ಕೆ ಹೋಗಿದ್ದ ಸಮಯದಲ್ಲಿ ಗ್ರಾಮ ಪಂಚಾಯತ್ ಕಛೇರಿಯಲ್ಲಿ ಮಹಿಳಾ ಸಿಬ್ಬಂದಿ ಡಾಟಾ ಎಂಟ್ರಿ ಆಪರೇಟರ್ ಶ್ರೀಮತಿ ಪವಿತ್ರಾ ಆರ್ ಶೆಟ್ಟಿ ಅವರು ಇರುವಾಗ ಶೇಡಿಮನೆ ಗ್ರಾಮದ ಅಗಳಿಬೈಲು ನಿವಾಸಿ ಸತೀಶ್ ಹೆಗ್ಡೆ ಎಂಬವನು ಮಡಾಮಕ್ಕಿ ಗ್ರಾಮ ಪಂಚಾಯತ್ ಕಛೇರಿಗೆ ಮನೆ ನಂಬ್ರದ ಉದ್ದೇಶಕ್ಕೆ ಬಂದು ಮಹಿಳಾ ಸಿಬ್ಬಂದಿಯವರಿಗೆ ಬೆದರಿಸಿ ಹೊರಗಿನಿಂದ ಬಾಗಿಲನ್ನು ಮುಚ್ಚಿ ಹೊರಗಿನಿಂದ ಬೀಗ ಹಾಕಿ ಪಂಚಾಯತಿನ ಮಹಿಳಾ ಸಿಬ್ಬಂದಿಯನ್ನು ಅಕ್ರಮ ಬಂಧನದಲ್ಲಿರಿಸಿ ಭಯ ಭೀತರನ್ನಾಗಿಸುವಂತೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಈ ವಿಷಯವನ್ನು ಮಹಿಳಾ ಸಿಬ್ಬಂದಿ ದೂರವಾಣಿ ಮುಖಾಂತರ ಭಾಸ್ಕರ್ ಶೆಟ್ಟಿ ಯವರಿಗೆ ಮಾಹಿತಿ ನೀಡಿದ್ದು ವಿಷಯ ತಿಳಿದು ಭಾಸ್ಕರ್ ಶೆಟ್ಟಿ ಯವರು ಕಛೇರಿಗೆ ಬಂದಾಗ ಸತೀಶ ಹೆಗ್ಡೆ ಯು ಕಛೇರಿ ಎದುರು ನಿಂತು ಭಾಸ್ಕರ್ ಶೆಟ್ಟಿ ಯವರಿಗೆ ಮತ್ತು ಕಛೇರಿಯ ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ ಎಂದು ಭಾಸ್ಕರ ಶೆಟ್ಟಿ ಯವರು ನೀಡಿದ ದೂರಿನಂತೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಕಲಂ: 186, 342,504, 506 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.