Spread the love

ಹೆಬ್ರಿ: ದಿನಾಂಕ 11/04/2023 (ಹಾಯ್ ಉಡುಪಿ ನ್ಯೂಸ್) ಚಾರ ಗ್ರಾಮದ ಚಾರ ಬಸ್ಸು ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ವ್ಯಕ್ತಿಯೋರ್ವನನ್ನು ಹೆಬ್ರಿ ಪೋಲೀಸರು ಬಂಧಿಸಿದ್ದಾರೆ.

ಹೆಬ್ರಿ ಪೊಲೀಸ್‌ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ನಂದ ಕುಮಾರ .ಎಂ.ಎಂ.ಅವರಿಗೆ ದಿನಾಂಕ 10-04-2023 ರಂದು ಹೆಬ್ರಿ ತಾಲೂಕು ಚಾರ ಗ್ರಾಮದ ಚಾರ ಬಸ್ಸು ನಿಲ್ದಾಣದ ಬಳಿ ಓರ್ವ ವ್ಯಕ್ತಿ ಮಟ್ಕಾ ಜುಗಾರಿ ಆಟ ಆಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯಂತೆ ಕೂಡಲೇ ಸ್ಥಳಕ್ಕೆ ಠಾಣಾ ಸಿಬ್ಬಂದಿ ಗಳೊಂದಿಗೆ ದಾಳಿ ಮಾಡಿ ನೋಡಿದಾಗ ಅಲ್ಲಿ ಆರೋಪಿ ಅರುಣ ನಾಯ್ಕ ,ವಾಸ: ಮನೆ ನಂ: 1-205 ಕೆಸಾಪುರ ಯಡ್ತಾಡಿ ಅಂಚೆ ಯಡ್ತಾಡಿ ಗ್ರಾಮ ಕುಂದಾಪುರ ತಾಲೂಕು  ಎಂಬಾತ  ಬಸ್ಸು ನಿಲ್ದಾಣದ ಬದಿಯಲ್ಲಿ  ನಿಂತುಕೊಂಡು ಒಂದು ರೂಪಾಯಿಗೆ 70 ಎಂದು ಮಟ್ಕಾ ಜೂಜಾಟಕ್ಕೆ ಜನರನ್ನು ಕರೆದು ಚೀಟಿಯ ಮೇಲೆ ಪೆನ್ನಿನಿಂದ ಅಂಕಿಗಳನ್ನು ಬರೆಯುತ್ತಿದ್ದು ಅಲ್ಲಿಗೆ ದಾಳಿ ಮಾಡಿ ಆತನನ್ನು ಬಂಧಿಸಿ ಆತನ ಬಳಿಯಿದ್ದ 1,320 /-ರೂಪಾಯಿ ನಗದು, ಮಟ್ಕಾ ನಂಬ್ರ ಬರೆದ ಚೀಟಿ ಹಾಗೂ ಬಾಲ್ ಪೆನ್ನನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿರುತ್ತಾರೆ. ಈ ಬಗ್ಗೆ ಆತನ ಮೇಲೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಕಲಂ: 78(I)(III) KP ACT ರಂತೆ ಪ್ರಕರಣ ದಾಖಲಾಗಿದೆ.

error: No Copying!