ಬೈಂದೂರು: ದಿನಾಂಕ: 08/04/2023 (ಹಾಯ್ ಉಡುಪಿ ನ್ಯೂಸ್) ಒತ್ತಿನಣೆ ರಸ್ತೆಯಲ್ಲಿ ನಿಂತು ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.
ಬೈಂದೂರು ಪೊಲೀಸ್ ಠಾಣೆ , ಪೊಲೀಸ್ ಉಪ ನಿರೀಕ್ಷಕರಾದ ನಿರಂಜನ ಗೌಡ.ಎಸ್ ರವರು ದಿನಾಂಕ 07-04-2023 ರಂದು ಕರ್ತವ್ಯದಲ್ಲಿರುವಾಗ ಪೊಲೀಸ್ ವೃತ್ತ ನಿರೀಕ್ಷಕರಾದ ಸಂತೋಷ್ ಎ. ಕಾಯ್ಕಿಣಿ ರವರು ದೂರವಾಣಿ ಕರೆ ಮಾಡಿ ಪಡುವರಿ ಗ್ರಾಮದ ಒತ್ತಿನಾಣೆ ಹೇನುಬೇರು ಕಡೆಗೆ ಹೋಗುವ ರಸ್ತೆಯಲ್ಲಿ ಯಾರೋ ಒಬ್ಬ ವ್ಯಕ್ತಿ ಮೋಟಾರು ಸೈಕಲ್ ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾನೆ ಎನ್ನುವ ಬಗ್ಗೆ ಮಾಹಿತಿ ನೀಡಿದ್ದು, ಖಚಿತ ಮಾಹಿತಿಯಂತೆ ನಿರಂಜನ ಗೌಡ .ಎಸ್ ರವರು ಠಾಣಾ ಸಿಬ್ಬಂದಿಗಳೊಂದಿಗೆ ಬೈಂದೂರು ತಾಲೂಕು ಪಡುವರಿ ಗ್ರಾಮದ ಒತ್ತಿನೆಣೆ ಎಂಬಲ್ಲಿ ರಾ.ಹೆ 66 ರಿಂದ ಪೂರ್ವಕ್ಕೆ ಹೇನ್ ಬೇರು ರಸ್ತೆಯ 100 ಮೀ ಮುಂದೆ ಹೋದಾಗ ರಸ್ತೆಯ ಬದಿಯಲ್ಲಿ ಒಬ್ಬ ವ್ಯಕ್ತಿಯು ಅನುಮಾನಾಸ್ಪದ ರೀತಿಯಲ್ಲಿ ಮೋಟಾರು ಸೈಕಲ್ ನಿಲ್ಲಿಸಿಕೊಂಡು ನಿಂತುಕೊಂಡಿರುತ್ತಾನೆ.
ಆತ ಪೊಲೀಸರನ್ನು ನೋಡಿ ಅಲ್ಲಿಂದ ಓಡಿ ಹೋಗಲು ಯತ್ನಿಸಿದ್ದು, ಪೊಲೀಸರು ದಾಳಿ ನಡೆಸಿ ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತನ ಹೆಸರು ವಿಳಾಸ ವಿಚಾರಿಸಿದ್ದು ಆಶಿಕ್ ಖಾರ್ವಿ (20) ಎಂದು ತಿಳಿಸಿದ್ದು ಆತನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಪೊಲೀಸರು ವಿಚಾರಿಸಿದಾಗ ಆತನು ತಡವರಿಸುತ್ತಾ ಮಾತನಾಡಿದ್ದು, ಆತನ ನಡವಳಿಕೆಯಿಂದ ಸಂಶಯಗೊಂಡು ಆತನನ್ನು ಅಂಗ ಜಪ್ತಿ ಮಾಡಿದಾಗ ಆತನ ಪ್ಯಾಂಟ್ ಕಿಸೆಯಲ್ಲಿ ಇದ್ದ ಒಂದು ಪ್ಲಾಸ್ಟಿಕ್ ಜಿಪ್ ಕವರ್ ನಲ್ಲಿ ಇರುವ ಒಣಗಿದ ಗಾಂಜಾ ಇರುವ ಪ್ಯಾಕೇಟ್ ನ್ನು ತೆಗೆದು ಪೊಲೀಸರಿಗೆ ತೋರಿಸಿರುತ್ತಾನೆ. ಅದರಲ್ಲಿ ಒಣಗಿದ ಎಲೆ,ಕಾಂಡ, ಮೊಗ್ಗು ,ಹೂ ಗಳು ಮತ್ತು ಬೀಜ ಇದ್ದಿದ್ದು ಅದರ ವಾಸನೆಯಿಂದ ಗಾಂಜಾ ಎಂಬುದಾಗಿ ದೃಢಪಟ್ಟಿದ್ದು, ಅಲ್ಲದೇ ಆತನಲ್ಲಿ ಕವರಿನಲ್ಲಿರುವ ಒಣಗಿದ ಎಲೆಗಳ ಬಗ್ಗೆ ವಿಚಾರಿಸಿದಾಗ ಆತನು ಇದು ಗಾಂಜಾವಾಗಿದ್ದು, ಗ್ರಾಹಕರಿಗೆ ಮಾರಾಟ ಮಾಡಲು ಇಲ್ಲಿಗೆ ಬಂದಿರುವುದಾಗಿ ಪೊಲೀಸರಿಗೆ ತಿಳಿಸಿರುತ್ತಾನೆ. ಒಟ್ಟು ಗಾಂಜಾ 44.ಗ್ರಾಂ ಇದ್ದು ;ಅದರ ಅಂದಾಜು ಮೌಲ್ಯ 1,200/- ರೂ. ಮತ್ತು ಟಿವಿಎಸ್ ಕಂಪನಿಯ KA-20-EW-3212 NTORQ 125 RACE EDITION ಸ್ಕೂಟಿಯನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿರುತ್ತಾರೆ.
ಆಶಿಕ್ ಖಾರ್ವಿಯನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಕಲಂ: 8 (ಸಿ), 20 (ಬಿ) (ii) (ಎ) ಎನ್.ಡಿ.ಪಿ.ಎಸ್. ಕಾಯ್ದೆ-1985ರಂತೆ ಪ್ರಕರಣ ದಾಖಲಾಗಿರುತ್ತದೆ