- ಮಣಿಪಾಲ: ದಿನಾಂಕ:08-04-2023(ಹಾಯ್ ಉಡುಪಿ ನ್ಯೂಸ್) ಇಂದಿರಾನಗರದ ಮನೆಯೊಂದರ ದೈವದ ಕೊಠಡಿಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದಿರುವ ಬಗ್ಗೆ ಪೊಲೀಸರಿಗೆ ದೂರಲಾಗಿದೆ.
- ದಿನಾಂಕ 07/04/2023 ರಂದು ಬೆಳಿಗ್ಗೆ ಉಡುಪಿ ತಾಲೂಕು 80 ಬಡಗಬೆಟ್ಟು ಗ್ರಾಮದ ಇಂದಿರಾ ನಗರ ಎಂಬಲ್ಲಿರುವ ಪ್ರೆಟ್ಟಿ ಅರ್ಚನಾ 305 ವಿ ಪಿ ನಗರ 1 ನೇ ಮುಖ್ಯ ರಸ್ತೆ 5 ನೇ ಅಡ್ಡ ರಸ್ತೆ ಶಿವಳ್ಳಿ ಗ್ರಾಮ ಉಡುಪಿ ಇಲ್ಲಿ ವಾಸವಿರುವ ಸುಧಾಕರ ಕಿಣಿ ಎಂಬವರ ಮನೆ ದೇವರು’ ಸತ್ಯ ದೇವತೆ’ ದೇವಿಯ ಪೀಠ ಇರುವ ಕೊಠಡಿಗೆ ಯಾರೋ ಕಳ್ಳರು ಓಳ ಪ್ರವೇಶಿಸಿ ಗಾದ್ರೇಜ್‌ನಲ್ಲಿದ್ದ 44 ಗ್ರಾಂ ತೂಕದ ಕೈಯ ಡಿಸೈನ್ ಇರುವ ಚಿನ್ನದ ಕಡಗ -1, 16 ಗ್ರಾಂ ತೂಕದ ಬಲ ಕೈಗೆ ಹಾಕುವ ರುದ್ರಾಕ್ಷಿ ಮಣಿ ಪೋಣಿಸಿದ ಚಿನ್ನದ ಸರ -1, ಮತ್ತು 16 ಗ್ರಾಂ ತೂಕದ ಕುತ್ತಿಗೆಗೆ ಹಾಕುವ ರುದ್ರಾಕ್ಷಿ ಮಣಿ ಪೋಣಿಸಿದ ಚಿನ್ನದ ಸರ -1 ಇವುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
- ಕಳವಾದ ಚಿನ್ನಾಭರಣಗಳ ಒಟ್ಟು ಮೌಲ್ಯ ರೂ. 3,30,000/- ಆಗಬಹುದುದಾಗಿದೆ ಎನ್ನಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.