ಮಲ್ಪೆ: 1-04-2023(ಹಾಯ್ ಉಡುಪಿ ನ್ಯೂಸ್) ಕೊಡವೂರು ಗ್ರಾಮದ ಮಲ್ಪೆ ಬಸ್ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿದ್ದ ವ್ಯಕ್ತಿ ಯನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.
ಮಲ್ಪೆ ಪೊಲೀಸ್ ಠಾಣೆ ಪಿಎಸ್ಐ ಯವರಾದ ಗುರುನಾಥ ಬಿ.ಹಾದಿಮನಿ ಯವರು ದಿನಾಂಕ 29/03/2023 ರಂದು ಠಾಣೆಯಲ್ಲಿ ಇರುವಾಗ ಸಾರ್ವಜನಿಕ ರೋರ್ವರು ಕರೆ ಮಾಡಿ ಕೊಡವೂರು ಗ್ರಾಮದ ಮಲ್ಪೆ ಬಸ್ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ಆಸಾಮಿ ಕಾನೂನು ಬಾಹಿರವಾಗಿ ಮಟ್ಕಾ ಜುಗಾರಿ ಆಟ ಆಡಿಸುತ್ತಿರುವುದಾಗಿ ಮಾಹಿತಿ ನೀಡಿದ ಮೇರೆಗೆ ಮಟ್ಕಾ ಜುಗಾರಿ ಆಟ ಆಡುವಲ್ಲಿಗೆ ದಾಳಿ ನಡೆಸಲು ಠಾಣಾ ಸಿಬ್ಬಂದಿಯವರಾದ , ಹೆಚ್ ಸಿ .ಲೊಕೇಶ್, ಪಿಸಿ . ರವಿರಾಜ್ ರವರೊಂದಿಗೆ ಕೊಡವೂರು ಗ್ರಾಮದ ಮಲ್ಪೆ ಬಸ್ ನಿಲ್ದಾಣ ಬಳಿ ದಾಳಿ ನಡೆಸಿದಾಗ; ಜನರನ್ನು ಸೇರಿಸಿಕೊಂಡು ಅವರಿಂದ ಹಣ ಪಡೆದುಕೊಂಡು ಮಟ್ಕಾ ಜುಗಾರಿ ಆಟ ನಡೆಸುತ್ತಿರುವುದು ಕಂಡು ಬಂದಿದ್ದು , ಕೂಡಲೇ ದಾಳಿ ನಡೆಸಿ ಮಟ್ಕಾ ಚೀಟಿ ಪಡೆದು ಹಣ ಸಂಗ್ರಹಿಸುತ್ತಿದ್ದ ಆರೋಪಿ ಮಿಥುನ್ ಪೂಜಾರಿ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ತಾನು ಸ್ವಂತ ಲಾಭಕ್ಕಾಗಿ ಮಟ್ಕಾ ಜುಗಾರಿ ಆಟವನ್ನು ನಡೆಸುತ್ತಿರುವುದಾಗಿ ತಪ್ಪೋಪ್ಪಿಕೊಂಡಿರುತ್ತಾನೆ ಎನ್ನಲಾಗಿದೆ. ಆತನಿಂದ ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ಒಟ್ಟು 1200 /- ರೂಪಾಯಿ ,ಮಟ್ಕಾ ಚೀಟಿ-1 ಹಾಗೂ ಬಾಲ್ ಪೆನ್ನು -1 ನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.