Spread the love

ಹಿರಿಯಡ್ಕ: ದಿನಾಂಕ1-04-2023 (ಹಾಯ್ ಉಡುಪಿ ನ್ಯೂಸ್) ಹಿರಿಯಡ್ಕ ಬಸ್ ನಿಲ್ದಾಣದ ಬಳಿ ಬೆಳ್ಳಂಬೆಳಗ್ಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಹಿರಿಯಡ್ಕ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

 ಹಿರಿಯಡ್ಕ ಪೊಲೀಸ್‌ ಠಾಣೆಯ  ಪಿ.ಎಸ್‌.ಐ ಅನಿಲ್.ಬಿ.ಎಂ ರವರಿಗೆ  ದಿನಾಂಕ 31-03-2023 ರಂದು ಬೆಳಿಗ್ಗೆ,7 ಘಂಟೆಗೆ ಹಿರಿಯಡ್ಕ ಬಸ್ ನಿಲ್ದಾಣ ಬಳಿ ಓರ್ವ ವ್ಯಕ್ತಿ  ಪ್ಲಾಸ್ಟಿಕ್ ತೊಟ್ಟೆಯಲ್ಲಿ ಮದ್ಯವನ್ನು  ಮಾರಾಟ ಮಾಡುತ್ತಿರುವುದಾಗಿ  ಸಾರ್ವಜನಿಕರೋರ್ವರು ನೀಡಿದ  ಖಚಿತ ಮಾಹಿತಿಯಂತೆ ಠಾಣೆಯ ಸಿಬ್ಬಂದಿಯೊಂದಿಗೆ ಕೂಡಲೇ ದಾಳಿ ನಡೆಸಿದ್ದು ; ಹಿರಿಯಡ್ಕ ಬಸ್ ನಿಲ್ದಾಣ ಬಳಿ ಪ್ಲಾಸ್ಟಿಕ್ ತೊಟ್ಟೆಯಲ್ಲಿ ಮದ್ಯದ ಪ್ಯಾಕೆಟ್ ಗಳನ್ನು  ತುಂಬಿಕೊಂಡು  ಮಾರಾಟ ಮಾಡುತ್ತಿದ್ದ ಮಹೇಂದ್ರ ಪ್ರಭು ಎಂಬಾತನನ್ನು ಬಂಧಿಸಿ ವಶಕ್ಕೆ  ಪಡೆದು ಆತನ ಬಳಿ ಇದ್ದ Original Choice ವಿಸ್ಕಿಯ 90 ML ನ 12 ಟೆಟ್ರಾ ಪ್ಯಾಕ್‌ಗಳು, Jhon Bull ವಿಸ್ಕಿಯ 180 MLನ 8   ಪ್ಲಾಸ್ಟಿಕ್ ಬಾಟಲಿ ( ಒಟ್ಟು 2.52 ಲೀ ವಿಸ್ಕಿ ಅಂದಾಜು ಮೌಲ್ಯ 900 ರೂ) ,ವಿಸ್ಕಿ ಹಾಕಲಾಗಿದ್ದ ಪ್ಲಾಸ್ಟಿಕ್ ತೊಟ್ಟೆ, 300/- ರೂ ನಗದು ಹಣ, 1 ಮೊಬೈಲ್ ಫೋನನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: No Copying!