Spread the love

ಬೈಂದೂರು: ದಿನಾಂಕ 17-03-2023 (ಹಾಯ್ ಉಡುಪಿ ನ್ಯೂಸ್ ) ಶಿರೂರು ಚೆಕ್ ಪೋಸ್ಟ್ ನಲ್ಲಿ 20 ಲಕ್ಷ ಅಕ್ರಮ ಹಣವನ್ನು ಸಾಗಾಟ ಮಾಡಲು ಪ್ರಯತ್ನಿಸಿದ್ದ ವ್ಯಕ್ತಿಯನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.

ಬೈಂದೂರು ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ನಿರಂಜನ ಗೌಡ ಬಿ ಎಸ್ ಅವರು ಸಿಬ್ಬಂದಿಗಳೊಂದಿಗೆ ದಿನಾಂಕ 16-03-2023ರಂದು ಉಡುಪಿ ಜಿಲ್ಲೆಯ ಗಡಿಭಾಗವಾದ ಶಿರೂರು ಗ್ರಾಮದ ಶಿರೂರು  ಪೊಲೀಸ್ ಚೆಕ್ ಪೋಸ್ಟ್ ನಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ ಭಟ್ಕಳ ಕಡೆಯಿಂದ ಬಂದ  ಹುಂಡೈ ಕಂಪೆನಿಯ ವೆನ್ಯೂ ಮಾದರಿಯ  ನೊಂದಣಿ ಸಂಖೈ ಇಲ್ಲದ (ಚಾಸಿಸ್ ನಂಬ್ರ MALFC81BLPM428542, ಇಂಜಿನ್ ನಂಬ್ರ G4LAPM428118) ಕಾರನ್ನು ನಿಲ್ಲಿಸಿ  ಪರಿಶೀಲಿಸಿದಾಗ ಕಾರಿನ ಹಿಂಬದಿಯ ಸೀಟಿನ ಕೆಳಗೆ ಪ್ಲಾಸ್ಟಿಕ್ ಚೀ⅞ಲದ ಕಟ್ಟು ಇದ್ದು  ಅದರಲ್ಲಿ ಹಣ ಇರುವುದು ಕಂಡು ಬಂದಿದ್ದು  ಕಾರಿನ ಚಾಲಕನಲ್ಲಿ ಹಣದ ಬಗ್ಗೆ ಯಾವುದೇ ದಾಖಲೆ ಇರುವ ಬಗ್ಗೆ ಪೊಲೀಸರು ವಿಚಾರಿಸಿದ್ದು, ಯಾವುದೇ ದಾಖಲೆ ಇರುವುದಿಲ್ಲವೆಂದು ತಿಳಿಸಿರುತ್ತಾರೆ.ಪೊಲೀಸರು  ಕಟ್ಟನ್ನು ಬಿಡಿಸಿ ಪರಿಶೀಲಿಸಿದಾಗ 100 ರೂ ಮುಖಬೆಲೆಯ 3000 ನೋಟುಗಳು, 200 ರೂ ಮುಖಬೆಲೆಯ 1000 ನೋಟುಗಳು  ಹಾಗೂ 500 ರೂ ಮುಖಬೆಲೆಯ 3000 ನೋಟುಗಳು ಇದ್ದು ಒಟ್ಟು 20 ಲಕ್ಷ ಹಣ ಇದ್ದಿರುತ್ತದೆ.  ಹಣದ ಬಗ್ಗೆ ಯಾವುದೇ ದಾಖಲೆ ಇಲ್ಲವೆಂದು ತಿಳಿಸಿದ ಮೇರೆಗೆ ಹಣವನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿರುತ್ತಾರೆ. ಅರೋಪಿ ಬಶೀರ್ (42) ವಾಸ: ಮಂಜಿಲಪಲ್ಕೆ ಶಿರ್ಲಾಲು ಬೆಳ್ತಂಗಡಿ ತಾಲೂಕು  ಯಾವುದೇ ದಾಖಲೆ ಇಲ್ಲದೇ ರೂ 20 ಲಕ್ಷ ನಗದು ಹಣವನ್ನು  ಕಾರಿನಲ್ಲಿ ಸಾಗಾಟ ಮಾಡಿದವನಾಗಿದ್ದು ಆತನ ಮೇಲೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: No Copying!