ಉಡುಪಿ: ದಿನಾಂಕ:17-03-2023(ಹಾಯ್ ಉಡುಪಿ ನ್ಯೂಸ್) ಮಣಿಪಾಲದ ಈಶ್ವರ ನಗರದಲ್ಲಿ ಮಾದಕವಸ್ತು ಗಾಂಜಾವನ್ನು ಮಾರಾಟ ಮಾಡಲು ಬಂದಿದ್ದ ಬಬ್ಲು ಕುಮಾರ್ ಎಂಬವನನ್ನು ಸೆನ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ದಿನಾಂಕ:16.03.2023 ರಂದು ಉಡುಪಿ ತಾಲೂಕು ಹೆರ್ಗ ಗ್ರಾಮದ ಈಶ್ವರ ನಗರದ 11 ನೇ ಅಡ್ಡರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡಲು ಕಾನೂನು ಬಾಹಿರವಾಗಿ ಹೊಂದಿದ್ದ ಬಬ್ಲು ಕುಮಾರ್ ಎಂಬಾತನನ್ನು ಖಚಿತ ಮಾಹಿತಿಯ ಮೇರೆಗೆ ಎಸ್.ಹೆಚ್ ಬಜಂತ್ರಿ ಪೊಲೀಸ್ ಉಪ ನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ ಇವರು ಕೂಡಲೇ ದಾಳಿ ನಡೆಸಿ ಬಬ್ಲುಕುಮಾರನನ್ನು ಬಂಧಿಸಿ ಆತನಿಂದ 1 ಕೆ.ಜಿ. 102 ಗ್ರಾಂ ತೂಕದ ಗಾಂಜಾ, ಕೆ.ಎ.-14-ವಿ-5230 ನೇ ಕಪ್ಪು ಬಣ್ಣದ ಬಜಾಜ್ ಪಲ್ಸರ್ ಮೋಟಾರ್ ಸೈಕಲ್ 1, ಮೊಬೈಲ್ ಪೋನ್- 1 ನ್ನು ವಶಪಡಿಸಿ ಕೊಂಡಿರುತ್ತಾರೆ. ಸ್ವಾಧೀನಪಡಿಸಿಕೊಂಡ ಗಾಂಜಾದ ಅಂದಾಜು ಮೌಲ್ಯ ರೂ.30,000/-ಮೋಟಾರ್ ಸೈಕಲ್‌ನ ಅಂದಾಜು ಮೌಲ್ಯ ರೂ. 10,000/- ಆಗಿರುತ್ತದೆ. ಸ್ವಾಧೀನಪಡಿಸಿಕೊಂಡಿರುವ 1 ಮೊಬೈಲ್ ಪೋನ್‌ನ ಅಂದಾಜು ಮೌಲ್ಯ ರೂ. 3000/-, ಸ್ವಾಧೀನಪಡಿಸಿಕೊಂಡಿರುವ ಎಲ್ಲಾ ಸ್ವತ್ತುಗಳ ಒಟ್ಟು ಅಂದಾಜು ಮೌಲ್ಯ ರೂ. 43,000/- ಆಗಿದ್ದು ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಕಲಂ : 8(C), 20(b)(ii) (B) ಎನ್.ಡಿ.ಪಿ. ಎಸ್. ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.