ತ್ರಿಶೂರ್: ದಿನಾಂಕ 25-02-2023 ( ಹಾಯ್ ಉಡುಪಿ ನ್ಯೂಸ್) ಕೇರಳ ಮೂಲದ ಚಿನ್ನಾಭರಣ ಮಾರಾಟ ಕಂಪನಿ ಜೋಯ್ ಆಲುಕ್ಕಾಸ್ ಸಂಸ್ಥೆಗಳ ಮಾಲೀಕ ಅಲುಕ್ಕಾಸ್ ವರ್ಗೀಸ್ ಅವರ ರೂ. 305 ಕೋಟಿಗೂ ಅಧಿಕ ಮೊತ್ತದ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಇಡಿ ಶುಕ್ರವಾರ ಮಾಹಿತಿ ನೀಡಿದೆ. ಹವಾಲ ಮೂಲಕ ದುಬೈಗೆ ಮಿತಿ ಮೀರಿದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಂಧಿಸಿದಂತೆ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯಲ್ಲಿ ಕೇರಳ ಮೂಲದ ಪ್ರತಿಷ್ಠಿತ ಚಿನ್ನಾಭರಣ ಮಾರಾಟ ಸಂಸ್ಥೆ ಜೋಯ್ ಆಲುಕ್ಕಾಸ್ ಸಮೂಹ ಸಂಸ್ಥೆಯ ಮಾಲೀಕ ಅಲುಕ್ಕಾಸ್ ವರ್ಗೀಸ್ ಅವರ ರೂ. 305 ಕೋಟಿಗೂ ಅಧಿಕ ಮೊತ್ತದ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಇಡಿ ಶುಕ್ರವಾರ ತಿಳಿಸಿದೆ.
ತ್ರಿಶೂರ್ ನಲ್ಲಿರುವ ಜೋಯ್ ಆಲುಕ್ಕಾಸ್ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಫೆಬ್ರವರಿ 22 ರಂದು ಇಡಿ ಶೋಧ ಕಾರ್ಯಾಚರಣೆ ನಡೆಸಿದ್ದು, ಶೋಭಾ ಸಿಟಿಯಲ್ಲಿನ ಭೂಮಿ ಮತ್ತು ವಸತಿ ಕಟ್ಟಡ ಸೇರಿದಂತೆ ರೂ. 81.54 ಕೋಟಿ ಮೊತ್ತದ 33 ಸ್ಥಿರಾಸ್ಥಿ ಮತ್ತು ಮೂರು ಬ್ಯಾಂಕ್ ಅಕೌಂಟ್ ಗಳಲ್ಲಿನ ರೂ.91. 22 ಲಕ್ಷ, ರೂ.5.58 ಕೋಟಿ ಮೊತ್ತದ ಮೂರು ಸ್ಥಿರ ಠೇವಣಿ ಮತ್ತು ಜೋಯಾಲುಕ್ಕಾಸ್ ಕಂಪನಿಗೆ ಸೇರಿದ ರೂ, 217.80ಕೋಟಿ ಮೊತ್ತದ ಷೇರುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಇಡಿ ತಿಳಿಸಿದೆ.
ರೂ. 305.84 ಕೋಟಿ ಮೊತ್ತದ ಈ ಎಲ್ಲಾ ಆಸ್ತಿಯನ್ನು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ ಸೆಕ್ಷನ್ 37ಎ ಅಡಿಯಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಇಡಿ ಮಾಹಿತಿ ನೀಡಿದೆ.