Spread the love
  • ಕುಂದಾಪುರ: ದಿನಾಂಕ 18-02/2023 (ಹಾಯ್ ಉಡುಪಿ ನ್ಯೂಸ್) ವಕ್ವಾಡಿ,ಹೆಗ್ಗರ್ ಬೈಲು ಬಳಿ ನಡೆಯತ್ತಿದ್ದ ಕೋಳಿ ಅಂಕಕ್ಕೆ ಕುಂದಾಪುರ ಪೊಲೀಸರು ದಾಳಿ ನಡೆಸಿದ್ದಾರೆ.
  • ಕುಂದಾಪುರ ಪೊಲೀಸ್ ಠಾಣಾ ಪೊಲೀಸ್‌ ನಿರೀಕ್ಷಕರಾದ  ಯು ಬಿ ನಂದಕುಮಾರ್‌ ರವರಿಗೆ ದಿನಾಂಕ:17-02-2023ರಂದು ಠಾಣೆಯಲ್ಲಿರುವಾಗ ಕುಂದಾಪುರ ತಾಲೂಕು ವಕ್ವಾಡಿ ಹೆಗ್ಗರ್‌ ಬೈಲು, ಚಿಕ್ಕು ಅಮ್ಮ ದೇವಸ್ಥಾನದ ಬಳಿ ಕೆಲವು ಜನರು ಸೇರಿಕೊಂಡು ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ಎಂಬ ಜುಗಾರಿ ಆಡುತ್ತಿರುವುದಾಗಿ ಸಾರ್ವಜನಿಕರಿಂದ ಬಂದ ಮಾಹಿತಿ ಮೇರೆಗೆ ಪ್ರಸಾದ್‌ ಕುಮಾರ್‌ ಕೆ, ಪಿಎಸೈ ಐ (ತನಿಖೆ) ಮತ್ತು  ಸಿಬ್ಬಂಧಿಯವರೊಂದಿಗೆ ಕುಂದಾಪುರ ತಾಲೂಕು ವಕ್ವಾಡಿ ಹೆಗ್ಗರ್‌ ಬೈಲು, ಚಿಕ್ಕು ಅಮ್ಮ ದೇವಸ್ಥಾನದ ಸಮೀಪ ತಲುಪಿದಾಗ ,ಅಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸುಮಾರು ಜನರು ಸಾರ್ವಜನಿಕರು ಒಟ್ಟು ಸೇರಿಕೊಂಡಿದ್ದು, ಕೋಳಿಗಳಿಗೆ ಹಿಂಸಾತ್ಮಕವಾಗಿ ಅದರ ಕಾಲಿಗೆ ಬಾಳು ಕತ್ತಿಯನ್ನು ಕಟ್ಟಿ ಕೋಳಿ ಅಂಕ ಎಂಬ ಜುಗಾರಿ ಹೇಳಿಕೊಂಡು ಹಣವನ್ನು ಪಣವಾಗಿ ಕಟ್ಟಿಕೊಳ್ಳುತ್ತಿದ್ದು ಕೂಡಲೇ ಪೊಲೀಸ್ ಸಿಬ್ಬಂದಿಯವರ ಸಹಾಯದಿಂದ ದಾಳಿ ನಡೆಸಿದಾಗ ಕೆಲವರು ಓಡಿ ಹೋಗಿದ್ದು, ಅವರೊಂದಿಗೆ ಇದ್ದ ಇಬ್ಬರು ವ್ಯಕ್ತಿಗಳನ್ನು ಸಿಬ್ಬಂದಿಯವರ ಸಹಾಯದಿಂದ ಹಿಡಿದು ಹೆಸರು ವಿಳಾಸ ವಿಚಾರಿಸಿದಾಗ ತನ್ನ ಹೆಸರು 1).ಮಂಜುನಾಥ್‌  ಪ್ರಾಯ: 31 ವರ್ಷ, ವಾಸ: ಸಮನ್ವಿ ನಿಲಯ, ತಲ್ಲೂರ್‌ ನೆಟ್ಟಿಬೈಲ್‌, ತಲ್ಲೂರ್‌ ಗ್ರಾಮ, ಕುಂದಾಪುರ ತಾಲೂಕು  ಉಡುಪಿ ಜಿಲ್ಲೆ,, 2). ಆದಿತ್ಯ ಪ್ರಾಯ:  25 ವರ್ಷ,  ವಾಸ:  ಶರತ್‌ ನಿಲಯ, ಗಾಣಿಗರ ಬೆಟ್ಟು, ಆನಗಳ್ಳಿ ಗ್ರಾಮ, ಕುಂದಾಪುರ ತಾಲೂಕು. ಉಡುಪಿ  ಜಿಲ್ಲೆ   ಎಂಬುದಾಗಿ ತಿಳಿಸಿರುತ್ತಾರೆ. ಹಣವನ್ನು ಪಣವಾಗಿ ಇಟ್ಟು, ತಮ್ಮ ಸ್ವಂತ ಲಾಭಕ್ಕೋಸ್ಕರ ಕೋಳಿ ಅಂಕ ಎಂಬ ಜುಗಾರಿ ಆಟ  ಆಡುತ್ತಿರುವುದಾಗಿ ಬಂಧಿತರು ಒಪ್ಪಿ ಕೊಂಡಿದ್ದು,  ಜುಗಾರಿ ಆಟಕ್ಕೆ ಬಳಸಿದ ಹಣವನ್ನು ಪೊಲೀಸರ ಮುಂದೆ ಹಾಜರುಪಡಿಸಿದ್ದು,  ಮಂಜುನಾಥ್‌ ಈತನ ವಶದಲ್ಲಿ  600/- , ಆದಿತ್ಯ ಈತನ ವಶದಲ್ಲಿ 300/- ರೂ, ಇದ್ದು,  ಒಟ್ಟು ನಗದು ರೂಪಾಯಿ 900 /- ಇರುತ್ತದೆ.  ಹಿಂಸಾತ್ಮಕವಾಗಿ ಜುಗಾರಿ ಆಟಕ್ಕೆ ಬಳಸಿದ 13 ಹುಂಜ ಕೋಳಿಗಳು ಅದೇ ಸ್ಥಳದಲ್ಲಿದ್ದು, ಅವುಗಳ  ಒಟ್ಟು ಅಂದಾಜು ಮೌಲ್ಯ ರೂ. 8000/- ಆಗಬಹುದು.  ಕೋಳಿಯ ಕಾಲಿಗೆ  ಕಟ್ಟಿದ ಬಾಳು (ಕತ್ತಿ) – 2,   ನಗದು 900/- ರೂಪಾಯಿ, 13 ಜೀವಂತ ಕೋಳಿ ಹುಂಜ ಇವುಗಳನ್ನು ಮುಂದಿನ ಕ್ರಮದ ಬಗ್ಗೆ ಪೊಲೀಸರು ಸ್ವಾಧೀನ ಪಡಿಸಿಕೊಂಡಿದ್ದು ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ  ಪ್ರಕರಣ ದಾಖಲಿಸಲಾಗಿದೆ.
error: No Copying!