Spread the love

ಉಡುಪಿ: ದಿನಾಂಕ:17-02-2023 (ಹಾಯ್ ಉಡುಪಿ ನ್ಯೂಸ್) ಪೊಲೀಸ್ ಅಧಿಕಾರಿಗಳ ವಸತಿ ಗ್ರಹದಲ್ಲಿ ಯಾರೋ ಕಳ್ಳತನ ನಡೆಸಿರುವ ಘಟನೆ ಉಡುಪಿ ನಗರದಲ್ಲಿ ನಡೆದಿದೆ.

ಉಡುಪಿ ಜಿಲ್ಲೆಯ, ಲೋಕಾಯುಕ್ತ ಪೊಲೀಸ್‌ ಠಾಣೆಯ ಪೊಲೀಸ್ ನಿರೀಕ್ಷಕರಾದ ರಫೀಕ್.ಎಂ ಅವರು ಉಡುಪಿ ನಗರ ಪೊಲೀಸ್‌ ಠಾಣೆಯ ಪಕ್ಕದಲ್ಲಿ ಇರುವ ಪೊಲೀಸ್‌ ಅಧಿಕಾರಿಗಳ ವಸತಿಗೃಹದಲ್ಲಿ ತನ್ನ ಸಂಸಾರದೊಂದಿಗೆ ವಾಸವಾಗಿದ್ದಾರೆ ಎನ್ನಲಾಗಿದೆ. ಅವರ ಕಾರು, ಸ್ಕೂಟಿ ಹಾಗೂ ಎರಡು ಸೈಕಲ್‌ಗಳನ್ನು ವಸತಿಗೃಹದ ಪಕ್ಕದಲ್ಲಿನ ಶೆಡ್‌ ನಲ್ಲಿ ನಿಲ್ಲಿಸಿದ್ದು, ದಿನಾಂಕ 13/02/2023 ರಂದು ಯಾರೋ ಕಳ್ಳರು ಸೈಕಲ್‌ಗಳಿಗೆ ಅಳವಡಿಸಿದ ಬೀಗವನ್ನು ಮುರಿದು ರೂಪಾಯಿ 9,600 ಮೌಲ್ಯದ HERO RAFALE ಕಂಪೆನಿಯ ಕೆಂಪು-ಕಪ್ಪು ಬಣ್ಣದ ಸೈಕಲ್‌-1 ಹಾಗೂ ರೂಪಾಯಿ 6,500/- ಮೌಲ್ಯದ RADIANT AMAZE ENZO ಕಂಪೆನಿಯ ಗ್ರೇ-ಬ್ಲೂ ಬಣ್ಣದ ಸೈಕಲ್‌-1 ನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ 2 ಸೈಕಲ್‌ಗಳ ಒಟ್ಟು ಮೌಲ್ಯ ರೂಪಾಯಿ 16,100/- ಆಗಿರುತ್ತದೆ ಎಂದು ದೂರು ನೀಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: No Copying!