Spread the love

ಕಾರ್ಕಳ: ದಿನಾಂಕ 17-02-2023( ಹಾಯ್ ಉಡುಪಿ ನ್ಯೂಸ್) ನಿಟ್ಟೆ ಗ್ರಾಮದ ದೂಪದ ಕಟ್ಟೆ ಸಾರ್ವಜನಿಕ ಬಸ್ಸು ನಿಲ್ದಾಣದ ಬಳಿ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ವ್ಯಕ್ತಿಯನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಪಿ.ಎಸ್.ಐ. ತೇಜಸ್ವಿ ಟಿ.ಐ. ರವರು ದಿನಾಂಕ 14-02-2023 ರಂದು  ಸಿಬ್ಬಂದಿ ಯವರೊಂದಿಗೆ ಇಲಾಖಾ ಜೀಪಿನಲ್ಲಿ ರೌಂಡ್ಸ್ ನಲ್ಲಿರುವಾಗ ನಿಟ್ಟೆ ಗ್ರಾಮದ ಬೀಟ್ ಸಿಬ್ಬಂದಿ ಪಿಸಿ , ಗೋವಿಂದಾಚಾರಿ ಅವರು ಕರೆ ಮಾಡಿ ನಿಟ್ಟೆ ಗ್ರಾಮದ ದೂಪದಕಟ್ಟೆ ಬಳಿಯ ಸಾರ್ವಜನಿಕ ಬಸ್ಸು ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿಯು ನಶೆಯಲ್ಲಿ ರಸ್ತೆ ಬದಿ ತೇಲಾಡುತ್ತಿರುವುದಾಗಿ ಮಾಹಿತಿ ನೀಡಿದ್ದು, ಅದರಂತೆ ನಿಟ್ಟೆ ಗ್ರಾಮದ ದೂಪದಕಟ್ಟೆ ಬಳಿಯ ಬಸ್ಸು ನಿಲ್ದಾಣದ ಬಳಿ ಹೋದಾಗ ನಶೆಯಲ್ಲಿ ತೇಲಾಡುತ್ತಿದ್ದ  ವ್ಯಕ್ತಿಯನ್ನು ವಿಚಾರಿಸಿದಾಗ, ಆ ವ್ಯಕ್ತಿ ತಾನು ‌ಗಾಂಜಾದಂತ ವಸ್ತುವನ್ನು ಸೇವನೆ  ಮಾಡಿರುವುದಾಗಿ ಒಪ್ಪಿದ್ದು ಆ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲಿಸಿದಾಗ ಆತನ ಬಾಯಿಯಿಂದ ಘಾಟು ವಾಸನೆ ಬರುತ್ತಿದ್ದು, ಅಸಂಬದ್ದ ರೀತಿಯಲ್ಲಿ ವರ್ತಿಸುತ್ತಿದ್ದ. ಆತ ಗಾಂಜಾ ಅಥವಾ ಮನೋದ್ರೇಕ ಅಮಲು ಪದಾರ್ಥ ಸೇವನೆ ಮಾಡಿರಬಹುದು ಎಂದು ಸಂಶಯ ಬಂದು ಆತನನ್ನು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಲ್ಲಿ ಆತ ಮಾದಕ ವಸ್ತು ಸೇವನೆ (Urine sample tested positive for Marijuana) ಮಾಡಿರುವುದು ದೃಢಪಟ್ಟಿರುವುದಾಗಿ ವೈದ್ಯರು ದೃಢಪತ್ರವನ್ನು ನೀಡಿದ್ದು ,ಈ ಬಗ್ಗೆ  ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ 27(b) ಎನ್‌.ಡಿ.ಪಿ.ಎಸ್‌. ಕಾಯಿದೆ ಯಂತೆ ಪ್ರಕರಣ ದಾಖಲಿಸಲಾಗಿದೆ.

error: No Copying!