ಕಾಪು: ದಿನಾಂಕ:05-02-2023 (ಹಾಯ್ ಉಡುಪಿ ನ್ಯೂಸ್) ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಕಟಪಾಡಿ ಸಮೀಪದ ಪಾಂಗಾಳದಲ್ಲಿ ಯುವಕನೋರ್ವನನ್ನು ಚೂರಿಯಿಂದ ಇರಿದು ಕೊಲೆ ಮಾಡಲಾಗಿದೆ.
ಇಂದು ಸಂಜೆ ಪಾಂಗಾಳ ಹಳೆಯ ಬಾರ್ ಪಕ್ಕದಲ್ಲಿ ದುಷ್ಕರ್ಮಿಗಳು ಚೂರಿಯಿಂದ ಎದೆಯ ಭಾಗಕ್ಕೆ ಇರಿದು ಯುವಕನೋರ್ವನನ್ನು ಹತ್ಯೆಗೈದಿದ್ದಾರೆ.ಹತ್ಯೆಯಾದ ಯುವಕನನ್ನು ಪಾಂಗಾಳ ನಿವಾಸಿ ಶರತ್ ಶೆಟ್ಟಿ (36) ಎಂದು ಗುರುತಿಸಲಾಗಿದೆ.ಘಟನೆ ನಡೆದಾಗ ಸ್ಥಳೀಯರು ಚೂರಿ ಇರಿತಕ್ಕೊಳಗಾದ ಯುವಕನನ್ನು ಆಸ್ಪತ್ರೆಗೆ ಸಾಗಿಸಿದರೂ ದಾರಿ ಮಧ್ಯದಲ್ಲಿ ಯುವಕ ಪ್ರಾಣ ಬಿಟ್ಟಿದ್ದಾನೆ ಎನ್ನಲಾಗಿದೆ.
ಭೂವ್ಯವಹಾರಕ್ಕೆ ಸಂಬಂಧಿಸಿದಂತೆ ಹತ್ಯೆ ನಡೆದಿದೆ ಎಂದು ಶಂಕಿಸಲಾಗಿದೆ. ಕಾಪು ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.