
- ಮಣಿಪಾಲ: ದಿನಾಂಕ 05-02-2023 (ಹಾಯ್ ಉಡುಪಿ ನ್ಯೂಸ್) ಸರಳಬೆಟ್ಟು ಪರಿಸರದಲ್ಲಿ ಗಾಂಜಾ ಸೇವನೆ ಮಾಡಿದ್ದ ಯುವಕರನ್ನು ಮಣಿಪಾಲ ಪೊಲೀಸ್ ಠಾಣೆಯ ಎ.ಎಸ್.ಐ ಶೈಲೇಶ ಕುಮಾರ ಅವರು ಬಂಧಿಸಿದ್ದಾರೆ.
- ಮಣಿಪಾಲ ಪೊಲೀಸ್ ಠಾಣಾ ಎ.ಎಸ್.ಐ ಶೈಲೇಶ ಕುಮಾರ ಹಾಗೂ ಸಿಬ್ಬಂದಿ ಆನಂದಯ್ಯ ಮತ್ತು ಉಮೇಶ ಯಾದವ ಇವರುಗಳು ಮಾದಕ ವಸ್ತು ಗಾಂಜಾವನ್ನು ಸೇವಿಸಿರುವ ಸಂದೇಹದ ಮೇಲೆ ಪ್ರಥಮೇಶ .ಬಿ.ಪೈ ಹಾಗೂ ಮೊಹಮ್ಮದ್ ಖಾಯಸ್ ಎಂಬವರನ್ನು ಉಡುಪಿ ತಾಲೂಕು ಮಣಿಪಾಲ ಸರಳಬೆಟ್ಟು ಹೈಪಾಯಿಂಟ್ ಅಪಾರ್ಟ್ ಮೆಂಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾವನ್ನು ಸೇವನೆ ಮಾಡಿರುವ ಅನುಮಾನದ ಮೇರೆಗೆ ದಿನಾಂಕ: 01-02-2023 ರಂದು ಬಂಧಿಸಿದ್ದಾರೆ
- ಆವರನ್ನು ವಿಚಾರಣೆ ನಡೆಸಿ ಅದೇ ದಿನ ದಿನಾಂಕ: 01.02.2023 ರಂದು ಆವರನ್ನು ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು ಪ್ರಥಮೇಶ.ಬಿ.ಪೈ ಹಾಗೂ ಮೊಹಮ್ಮದ್ ಖಾಯಸ್ ಅವರು ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ದೃಢಪತ್ರವನ್ನು ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ಠಾಣೆಯಲ್ಲಿ 27(b) NDPS Act ನಂತೆ ಪ್ರಕರಣ ದಾಖಲಾಗಿದೆ.