- ಗಂಗೊಳ್ಳಿ: ದಿನಾಂಕ:2-02-2023 (ಹಾಯ್ ಉಡುಪಿ ನ್ಯೂಸ್) ಗಂಗೊಳ್ಳಿ ಗ್ರಾಮದಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿದ್ದ 6 ಜನರನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.
- ಗಂಗೊಳ್ಳಿ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ವಿನಯ ಎಂ ಕೊರ್ಲಹಳ್ಳಿ ಇವರಿಗೆ ದಿನಾಂಕ 31-01-2023 ರಂದು ಗಂಗೊಳ್ಳಿ ಗ್ರಾಮದ ಮತ್ಸ ಸೌಧ ಸೈಟಿನ ಎದುರು ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣವಾಗಿಟ್ಟು ಇಸ್ಪೀಟು ಎಲೆಗಳಿಂದ ಜುಗಾರಿ ಆಟವಾಡುತ್ತಿದ್ದ ಬಗ್ಗೆ ಸಾರ್ವಜನಿಕರಿಂದ ಬಂದ ಮಾಹಿತಿ ಮೇರೆಗೆ ಅವರು ಕೂಡಲೇ ದಾಳಿ ನಡೆಸಿದಾಗ ಅಲ್ಲಿ ಜುಗಾರಿ ಆಡುತ್ತಿದ್ದ 1.ಅಂತೋನಿ ಬ್ರೋನ್ಸನ್ ಫೆರ್ನಾಂಡೀಸ್ (39), ವಾಸ: ಮನೆ ನಂಬ್ರ 89/86, ಗಂಗೊಳ್ಳಿ ಐಸ್ ಪ್ಲ್ಯಾಂಟ್ ಹತ್ತಿರ, ಬಂದರ್ ರೋಡ್, ಗಂಗೊಳ್ಳಿ ಗ್ರಾಮ, ಕುಂದಾಪುರ , 2.ಉತ್ತಮ್ ಖಾರ್ವಿ (46), ವಾಸ: ಚರ್ಚ್ ರೋಡ್, ಗಂಗೊಳ್ಳಿ ಗ್ರಾಮ, ಕುಂದಾಪುರ, 3) ಡಿಲೆಕ್ಸ್ ಪಿಂಟೋ (62), ವಾಸ: ಕೆ.ಎಫ್.ಡಿ.ಸಿ ಕ್ವಾಟ್ರಸ್ ಬಳಿ, ಬಂದರ್ ರೋಡ್, ಗಂಗೊಳ್ಳಿ ಗ್ರಾಮ, ಕುಂದಾಪುರ, 4) ಅಲೆಕ್ಸ್ ಫೆರ್ನಾಂಡೀಸ್ (56), ವಾಸ: ಕೆ.ಎಫ್.ಡಿ.ಸಿ ಕ್ವಾಟ್ರಸ್ ಬಳಿ, ಬಂದರ್ ರೋಡ್, ಗಂಗೊಳ್ಳಿ ಗ್ರಾಮ, ಕುಂದಾಪುರ , 5.ಫೆಲಿಕ್ಸ್ ಫೆರ್ನಾಂಡೀಸ್ (66), ವಾಸ; ಚರ್ಚ್ ರೋಡ್, ಗಂಗೊಳ್ಳಿ ಗ್ರಾಮ, ಕುಂದಾಪುರ, 6) ಜಾನ್ ಫೆರ್ನಾಂಡೀಸ್ (55), ವಾಸ: ಕೆ.ಎಫ್.ಡಿ.ಸಿ ಕ್ವಾಟ್ರಸ್ ಬಳಿ, ಬಂದರ್ ರೋಡ್, ಗಂಗೊಳ್ಳಿ ಗ್ರಾಮ, ಕುಂದಾಪುರ ಎಂಬವರನ್ನು ಬಂಧಿಸಿ ವಶಕ್ಕೆ ಪಡೆದು ಇಸ್ಪಿಟ್ ಜುಗಾರಿ ಆಟಕ್ಕೆ ಉಪಯೋಗಿಸಿದ ನಗದು ಹಣ 1,910/ ರೂಪಾಯಿ, ಇಸ್ಪೀಟ್ ಎಲೆ-52, ಆಟಕ್ಕೆ ಉಪಯೋಗಿಸಿದ ಹಳೆಯ ನ್ಯೂಸ್ ಪೇಪರ್‌ಅನ್ನು ವಶಪಡಿಸಿಕೊಂಡಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.