Spread the love

ಕುಂದಾಪುರ: ದಿನಾಂಕ 2-02-2023 (ಹಾಯ್ ಉಡುಪಿ ನ್ಯೂಸ್) ಗುಲ್ವಾಡಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ವ್ಯಕ್ತಿ ಯನ್ನು ಪೊಲೀಸರು ಬಂಧಿಸಿದ್ದಾರೆ.

ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಪವನ್ ನಾಯಕ್ ಇವರು ದಿನಾಂಕ 31-01-2023 ರಂದು ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಗುಲ್ವಾಡಿ ಗ್ರಾಮದ ಮಾವಿನಕಟ್ಟೆಯ ಚೆರಿಯಬ್ಬ ಸಾಹೇಬರ ಗೇರು ಬೀಜ ಪ್ಯಾಕ್ಟರಿ ಬಳಿಯಿರುವ ಬಸ್ಸು ನಿಲ್ದಾಣದಲ್ಲಿ ಓರ್ವ ವ್ಯಕ್ತಿ ಸಾರ್ವಜನಿಕವಾಗಿ ಮದ್ಯವನ್ನು ಸೇವನೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಬಂದ ಮಾಹಿತಿಯಂತೆ  ದಾಳಿ ನಡೆಸಿದಾಗ ಆ ವ್ಯಕ್ತಿಯು ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದ್ದು ನಂತರ ಆತನನ್ನು ಪೊಲೀಸರು ಹಿಡಿದು ವಿಚಾರಿಸಿದಾಗ ಆತನ ಹೆಸರು ಸುರೇಂದ್ರ ಶೆಟ್ಟಿ (51), ವಾಸ: ಶ್ರೀ ಮಂಜುನಾಥ ನಿಲಯ, ಜಡ್ಡಿನಕೊಡ್ಲು, ನೇರಳಕಟ್ಟೆ, ಕರ್ಕುಂಜೆ ಗ್ರಾಮ, ಕುಂದಾಪುರ ತಾಲೂಕು ಎಂಬುದಾಗಿ ತಿಳಿಸಿದ್ದು, ಆತನನ್ನು ಪರಿಶೀಲಿಸಿದಾಗ 1) HAYWARDS Whisky 180 ml ಟೆಟ್ರಾ ಪ್ಯಾಕ್‌- 1, 2) HAYWARDS Whisky 90 ml ಟೆಟ್ರಾ ಪ್ಯಾಕ್‌- 1, 3) HAYWARDS Whisky 180 ml ಟೆಟ್ರಾ ಖಾಲಿ ಪ್ಯಾಕ್‌- 1 ಇದ್ದಿರುವುದು ಕಂಡು ಬಂದಿದ್ದು ಅವುಗಳನ್ನು ವಶಪಡಿಸಿಕೊಂಡು ಆತನನ್ನು ಬಂಧಿಸಿ ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ .

error: No Copying!