ಬೈಂದೂರು: ದಿನಾಂಕ: 30-01-2023( ಹಾಯ್ ಉಡುಪಿ ನ್ಯೂಸ್ ) ಅಪರಿಚಿತ ವ್ಯಕ್ತಿ ಯೋರ್ವರು ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಸೊಸೈಟಿ ಜಗಲಿಯಲ್ಲಿ ಮ್ರತಪಟ್ಟಿದ್ದಾರೆ.
ದಿನಾಂಕ 29/01/2023 ರಂದು ಸಂಜೆ 5:30 ಗಂಟೆಗೆ ಬೈಂದೂರು ತಾಲೂಕು, ಯಡ್ತರೆ ಗ್ರಾಮದ,ಹುಣ್ಸೆಮನೆ ನಿವಾಸಿ ಸುಧಾಕರ ದೇವಾಡಿಗ ಇವರು ಉಪ್ಪುಂದದಿಂದ ತನ್ನ ಮನೆ ಕಡೆಗೆ ಮೋಟಾರು ಸೈಕಲ್ ನಲ್ಲಿ ಬರುತ್ತಿರುವಾಗ ಯಡ್ತರೆ ಗ್ರಾಮದ ಯಡ್ತರೆ ಸೊಸೈಟಿಯ ಹೊರಗಿನ ಜಗಲಿಯಲ್ಲಿ ಸುಮಾರು 60 ರಿಂದ 65 ವರ್ಷ ಪ್ರಾಯದ ಅಪರಿಚಿತ ಗಂಡಸು ಮಲಗಿದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಕಂಡು ಬಂದಿದ್ದು ಮೃತರು ನಾಲ್ಕೈದು ದಿನಗಳಿಂದ ಯಡ್ತರೆ ಪರಿಸರದಲ್ಲಿ ಬಿಕ್ಷೆ ಬೇಡುತ್ತಾ ಸೊಸೈಟಿ ಜಗುಲಿಯಲ್ಲಿ ಮಲಗಿಕೊಂಡಿದ್ದವರು ವಯೋಸಹಜ ಖಾಯಿಲೆಯಿಂದ ಅಥವಾ ಇನ್ನಾವುದೋ ಖಾಯಿಲೆಯಿಂದ ಬಳಲುತ್ತಿದ್ದವರು ಆರೋಗ್ಯದಲ್ಲಿ ಏರುಪೇರಾಗಿ ದಿನಾಂಕ 28-01-2023 ರಂದು ರಾತ್ರಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ .