Spread the love

ಕಾರ್ಕಳ: ದಿನಾಂಕ:29-01-2023 (ಹಾಯ್ ಉಡುಪಿ ನ್ಯೂಸ್) ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಈದು ಗ್ರಾಮದ ಮನೆಯೊಂದರಲ್ಲಿ ಕಳ್ಳರು ನುಗ್ಗಿ ಚಿನ್ನಾಭರಣ ಕದ್ದಿರುವ ಬಗ್ಗೆ ದೂರು ದಾಖಲಾಗಿದೆ.

28/01/2023 ರಂದು ರಾತ್ರಿ ಅವಧಿಯಲ್ಲಿ ಯಾರೋ ಕಳ್ಳರು ಕಾರ್ಕಳ ತಾಲೂಕು ಈದು  ಗ್ರಾಮದ ಹೊಸ್ಮಾರು, ಗಂಗೆನೀರು ಹದಿನಡ್ಕ ಎಂಬಲ್ಲಿನ ನಿವಾಸಿ ಶ್ರೀಮತಿ ಹರಿಣಾಕ್ಷಿ (39)ಎಂಬವರು ಮನೆಯಲ್ಲಿ ಇಲ್ಲದ ಸಮಯ ಯಾರೋ ಕಳ್ಳರು   ಮನೆಯ ಬಾಗಿಲಿನ ಬೀಗವನ್ನು ಯಾವುದೋ ಆಯುಧದಿಂದ ಒಡೆದು ತೆರದು  ಮನೆಯ ಒಳಗಡೆ ಪ್ರವೇಶಿಸಿ ಮನೆಯ ಕೊಠಡಿಯಲ್ಲಿದ್ದ ಗೋದ್ರೆಜ್ ನ ಬದಿಯಲ್ಲಿರುವ ಸೆಲ್ಪ್ ನ ಅಡಿಯಲ್ಲಿ ಇರಿಸಿದ್ದ ಗೋದ್ರೆಜ್ ಬೀಗದಿಂದ ಲಾಕರ್ ನ್ನು ತೆರೆದು ಸುಮಾರು 4,00,000/- ರೂ ಮೌಲ್ಯದ ಸುಮಾರು 105 ಗ್ರಾಂ ತೂಕದ ಬಂಗಾರದ ಒಡವೆಗಳನ್ನು ಹಾಗೂ ನಗದು ಹಣ 15000  ರೂಪಾಯಿಗಳನ್ನು   ಯಾರೋ ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ಈ ಬಗ್ಗೆ  ಶ್ರೀಮತಿ ಹರಿಣಾಕ್ಷಿ ಅವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ

error: No Copying!