Spread the love

ಕುಂದಾಪುರ: ದಿನಾಂಕ 17-01-2023(ಹಾಯ್ ಉಡುಪಿ ನ್ಯೂಸ್) ಸಾರ್ವಜನಿಕ ಸ್ಥಳದಲ್ಲಿ ಜುಗಾರಿ ಆಡುತ್ತಿದ್ದವರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

ಕುಂದಾಪುರ ಪೊಲೀಸ್ ಠಾಣೆಯ ಪಿ.ಎಸ್.ಐ (ತನಿಖೆ) ಪ್ರಸಾದ್ ಕುಮಾರ್ ಕೆ ರವರು ದಿನಾಂಕ 15-01-2023 ರಂದು ರೌಂಡ್ಸ್  ಕರ್ತವ್ಯದಲ್ಲಿರುವಾಗ  ಕುಂದಾಪುರ ತಾಲೂಕು ಕುಂದಾಪುರ ಕಸಬಾ  ಗ್ರಾಮದ  ಮೀನು ಮಾರ್ಕೆಟ್  ರಸ್ತೆಯಲ್ಲಿರುವ ಶ್ರೀ ನಾಗ ಬೊಬ್ಬರ್ಯ ದೇವಸ್ಥಾನದ  ಬಳಿ  ಸಾರ್ವಜನಿಕ  ಸ್ಥಳದಲ್ಲಿ ಅಂದರ್ ಬಾಹರ್ ಎಂಬ ಜುಗಾರಿ ಆಟ ಆಡುತ್ತಿದ್ದಾರೆಂದು ಪೊಲೀಸ್ ಉಪಾಧೀಕ್ಷಕರು ಕುಂದಾಫುರ ಉಪವಿಭಾಗ ಇವರಿಗೆ ದೊರೆತ ಖಚಿತ ಮಾಹಿತಿಯಂತೆ ದಾಳಿ ನಡೆಸಲು ಆದೇಶ  ನೀಡಿದ ಮೇರೆಗೆ ಪಿಎಸ್ಐ ರವರು ಸಿಬ್ಬಂದಿಗಳೊಂದಿಗೆ ಕುಂದಾಪುರ ತಾಲೂಕು ಕುಂದಾಫುರ ಕಸಬಾ ಗ್ರಾಮದ ಮೀನು ಮಾರ್ಕೆಟ್ ರಸ್ತೆಯಲ್ಲಿರುವ ಶ್ರೀ ನಾಗ ಬೊಬ್ಬರ್ಯ ದೇವಸ್ಥಾನದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಎಂಬ ಇಸ್ಪೀಟ್ ಆಟದಲ್ಲಿ ಹಣವನ್ನು ಪಣವಾಗಿಟ್ಟು  ಜೂಜಾಟ ಆಡುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ 1). ಸತೀಶ ಪ್ರಾಯ: 35 ವರ್ಷ, ವಾಸ: ಗೋವೆಬೆಟ್ಟು, ನೇರಂಬಳ್ಳಿ ಹಂಗಳೂರು ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ 2). ಗಣೀಶ, ಪ್ರಾಯ: 32 ವರ್ಷ, ವಾಸ: ಗಿರಿಜಾ ನಿಲಯ, ಕಲ್ಯಾಣಸ್ವಾಮಿ ರಸ್ತೆ, ಕುಂದಾಪುರ ಕಸಬಾ ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ 3). ಅನಿಲ್ ಡಿ’ಸೋಜಾ, ಪ್ರಾಯ: 43 ವರ್ಷ, ವಾಸ:  ಬಾಯಮ್ಮನ ಹಿತ್ಲು, ಮೀನು ಮಾರ್ಕೇಟ್ ರಸ್ತೆ, ಕುಂದಾಪುರ ಕಸಬಾ ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ 4). ಸಂದೇಶ, ಪ್ರಾಯ: 31 ವರ್ಷ, ವಾಸ: ಅಂಚೆಮನೆ, ಮೀನು ಮಾರ್ಕೇಟ್ ರಸ್ತೆ, ಕುಂದಾಪುರ ಕಸಬಾ ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ಇವರುಗಳನ್ನು ಸಿಬ್ಬಂದಿಗಳ  ಸಹಾಯದಿಂದ  ಹಿಡಿದುಕೊಂಡು ಅವರ ಹೆಸರು ವಿಳಾಸ ವಿಚಾರಿಸಿ ಅವರುಗಳು ತಾವು ಇಸ್ಪೀಟ್ ಜುಗಾರಿ  ಆಟದಲ್ಲಿ ಹಣವನ್ನು ಪಣವಾಗಿಟ್ಟು ಜೂಜಾಟ ಆಟ ಆಡುತ್ತಿದ್ದುದಾಗಿ ಒಪ್ಪಿಕೊಂಡಿದ್ದ ರಿಂದ ಅವರನ್ನು ವಶಕ್ಕೆ ಪಡೆದು  ಆರೋಪಿತರು ಇಸ್ಪೀಟು ಜುಗಾರಿ ಆಟಕ್ಕೆ ಉಪಯೋಗಿಸಿದ ನಗದು ರೂ. 2140/-, ಹಳೆಯ ದಿನಪತ್ರಿಕೆ-1, ಇಸ್ಪೀಟು ಎಲೆಗಳು-52 ಇವುಗಳನ್ನು ಸ್ವಾಧೀನಪಡಿಸಿಕೊಂಡಿದ್ದು ಈ ಬಗ್ಗೆ ಕುಂದಾಪುರ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: No Copying!