Spread the love

ಮಣಿಪಾಲ: ದಿನಾಂಕ 15-01-2023(ಹಾಯ್ ಉಡುಪಿ ನ್ಯೂಸ್) ಉಡುಪಿ , ಮಣಿಪಾಲದಲ್ಲಿ ದರೋಡೆ ಯಂತಹ ದುಷ್ಕೃತ್ಯ ನಡೆಸಲು ಸಂಚು ನಡೆಸುತ್ತಿದ್ದ ಮಾದಕ ವ್ಯಸನಿ ಗಳಾದ ನಾಲ್ವರು ಯುವಕರನ್ನು ಮಣಿಪಾಲ ಪೊಲೀಸರು ಕ್ಷಿಪ್ರ ಕಾರ್ಯಾಚರಣೆಯೊಂದರಲ್ಲಿ ಬಂಧಿಸುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಮಣಿಪಾಲ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕರಾದ ದೇವರಾಜ್ ಟಿ.ವಿ ರವರಿಗೆ ದಿನಾಂಕ 13-01-2023 ರಂದು ಬಂದ ಖಚಿತ ವರ್ತಮಾನದಂತೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ವಿ ಪಿ ನಗರದ 3 ನೇ ಮುಖ್ಯ ರಸ್ತೆ,  2ನೇ ಅಡ್ಡ ರಸ್ತೆ ಯಲ್ಲಿರುವ ಅನಂತ ರೆಸಿಡೆನ್ಸಿಯ 3 ನೇ ಮಹಡಿಯ ಫ್ಲ್ಯಾಟ್ ನಂಬ್ರ 201 ಕ್ಕೆ ದಾಳಿ ನಡೆಸಿದಾಗ ಮಾದಕ ವಸ್ತುಗಳನ್ನು ಹೊಂದಿ ದರೋಡೆ ಮಾಡುವ ಉದ್ದೇಶದಿಂದ ಹೊಂಚು ಹಾಕುತ್ತಿದ್ದ ವ್ಯಕ್ತಿಗಳನ್ನು  ಪೊಲೀಸ್ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.

  1.ಮುಝಾಮಿಲ್, (27) 2. ಮೊಹಮ್ಮದ್‌ ಅನಾಜ್‌ ಸಾಹೇಬ್‌ (25) 3. ಮೊಹಮ್ಮದ್‌ ರಪೀಕ್‌ (26) 4.ನಿಯಾಲ್, (19) ಎಂಬವರನ್ನು ಪೊಲೀಸರು ಬಂಧಿಸಿದ್ದು ಅವರ ವಶದಲ್ಲಿದ್ದ MDMA ಮಾದಕ ವಸ್ತು , ಗಾಂಜಾ , Sterile Water Cakkattattatta For INJ I.P Pyarogen Free ಎಂದು ಬರೆದ 10 ML ಸೀಸೆ, ಮಚ್ಚು -1, ಚೂರಿ -1, ಕಬ್ಬಿಣದ ಸುತ್ತಿಗೆ -1, ಮರದ ಸೋಂಟೆ -1 ಹಾಗೂ 5 – ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸ್ವತ್ತಿನ ಮೌಲ್ಯ ರೂಪಾಯಿ. 50,550/- ಆಗಬಹುದು ಎಂದು ಅಂದಾಜಿಸಲಾಗಿದೆ,  ದಾಳಿ ನಡೆಸುವ ಸಮಯದಲ್ಲಿ ಆರೋಪಿ ರಾಕೀಬ್ ಎಂಬುವವನು  ಪರಾರಿಯಾಗಿದ್ದಾನೆ . ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ 11/2023 ಕಲಂ: 399, 402 IPC 8 (c) 20(b) (II) (A) 21(b) 22(b)  ಎನ್.ಡಿ.ಪಿ.ಎಸ್ ಆಕ್ಟ್‌ರಂತೆ ಪ್ರಕರಣ ದಾಖಲಾಗಿದೆ. 

error: No Copying!