- ಶಂಕರನಾರಾಯಣ: ದಿನಾಂಕ 23.12.2022 (ಹಾಯ್ ಉಡುಪಿ ನ್ಯೂಸ್) ಹೈಕಾಡಿಯ ಮನೆಯೊಂದರಲ್ಲಿನ ಅಕ್ರಮ ಕಸಾಯಿಖಾನೆಗೆ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.
- ದಿನಾಂಕ 22-12-2022 ರಂದು ಶಂಕರನಾರಾಯಣ ಪೊಲೀಸ್ ಠಾಣೆ ಪಿಎಸ್ಐ ಶ್ರೀಧರ ನಾಯ್ಕರವರಿಗೆ ಖಚಿತ ಮಾಹಿತಿ ಬಂದಂತೆ ಬ್ರಹ್ಮಾವರ ತಾಲೂಕಿನ ಹಿಲಿಯಾಣ ಗ್ರಾಮದ ಹೈಕಾಡಿ ಎಂಬಲ್ಲಿ ಇಮ್ತಿಯಾಜ್ ಎಂಬುವರಿಗೆ ಸೇರಿದ ವಾಸ್ತವ್ಯದ ಮನೆಯ ಬದಿಯ ಶೆಡ್‌ಗೆ ಪೊಲೀಸ್ ಸಿಬ್ಬಂದಿಗಳೊಂದಿಗೆ ದಾಳಿ ಮಾಡಿದ್ದು, ಈ ಸಮಯ ಶೆಡ್‌ನಲ್ಲಿ ಆರೋಪಿಗಳು ಯಾವುದೇ ಪರವಾನಿಗೆ ಹೊಂದದೇ ಅಕ್ರಮವಾಗಿ ಕಸಾಯಿಖಾನೆ ಮಾಡಿ ಕೊಂಡಿರುವುದು ಗೊತ್ತಾಗಿದೆ.
- ಅದಾಗಲೇ ಹೈಕಾಡಿ ನೀರಿನ ಟ್ಯಾಂಕ್ ಬಳಿ ಮೇಯಲು ಬಿಟ್ಟಿದ್ದ ಗಂಡು ದನದ ಕರುವನ್ನು ಕಳವು ಮಾಡಿಕೊಂಡು ಬಂದು ಶೆಡ್ ನಲ್ಲಿ ಹತ್ಯೆ ಮಾಡಿ ಮಾಂಸ ಮಾಡಿರುವುದನ್ನು ತನಿಖೆ ವೇಳೆ ಒಪ್ಪಿಕೊಂಡಿರುತ್ತಾರೆ ಎನ್ನಲಾಗಿದೆ.
- ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.