- ಮಣಿಪಾಲ: ದಿನಾಂಕ 21-12-2022 (ಹಾಯ್ ಉಡುಪಿ ನ್ಯೂಸ್) ಮಣಿಪಾಲ ಪರಿಸರದಲ್ಲಿ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಮೂವರು ಯುವಕರನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
- ಮಣಿಪಾಲ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಅಬ್ದುಲ್ ಖಾದರ್ ಅವರು ದಿನಾಂಕ 17-12-2022 ರಂದು ಕರ್ತವ್ಯ ದಲ್ಲಿದ್ದಾಗ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದ ಕ್ರಮ್ಸ್ ಬೇಕರಿ ಬಳಿ ಗಾಂಜಾ ಸೇವನೆ ಮಾಡಿದಂತೆ ವರ್ತಿಸುತ್ತಿದ್ದ ಅಭಿನಂದ್ ಮತ್ತು ಸಿದ್ಧಾರ್ಥ್.ವಿ ಎಂಬವರನ್ನು ಹಾಗೂ ವಿದ್ಯಾರತ್ನ ನಗರದ ಮಾಂಡವಿ ಎಮ್ರಾಲ್ಡ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿದ್ದಂತೆ ವರ್ತಿಸುತ್ತಿದ್ದ ಸಾರ್ಥಕ್ ಸಿಂಗ್ ಎಂಬವನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
- ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಪೊಲೀಸರು ಈ ಮೂವರನ್ನು ಹಾಜರುಪಡಿಸಿರುತ್ತಾರೆ. ಅಬಿನಂದ್ .ಎ.ಎಸ್ , ಸಿದ್ಧಾರ್ಥ್.ವಿ. ಹಾಗೂ ಸಾರ್ಥಕ್ ಸಿಂಗ್ ಎಂಬವರು ಗಾಂಜಾ ಸೇವಿಸಿರುವ ಬಗ್ಗೆ ವೈದ್ಯರು ದೃಢಪತ್ರವನ್ನು ನೀಡಿದ್ದು ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.