Spread the love

ಬೈಂದೂರು: ದಿನಾಂಕ 19-12-2022 (ಹಾಯ್ ಉಡುಪಿ ನ್ಯೂಸ್) ಬಟ್ಟೆ ಅಂಗಡಿಯ ಕೆಲಸಗಾರನೋರ್ವ ಅನಾರೋಗ್ಯ ಪೀಡಿತರಾದ ಮಾಲೀಕರು ಮನೆಯಲ್ಲಿ ಚಿಕಿತ್ಸೆ ಯಲ್ಲಿದ್ದ ಸಮಯದಲ್ಲಿ ಅಂಗಡಿಯ ಬಟ್ಟೆಗಳನ್ನೆಲ್ಲಾ ಕದ್ದು ಪರಾರಿಯಾಗಲು ಯತ್ನಿಸಿದ ಬಗ್ಗೆ ದೂರು ದಾಖಲಾಗಿದೆ.

ಬೈಂದೂರು ತಾಲೂಕು ,ಕಾಲ್ತೋಡು ಗ್ರಾಮದ ,ಯಡೇರಿ ಜನತಾ ಕಾಲೋನಿ ನಿವಾಸಿ ಗಣೇಶ್ ಪ್ರಸಾದ್ ಶೆಟ್ಟಿ (23) ಎಂಬವರು ಉಪ್ಪುಂದ ಪೇಟೆಯ ಅಂಡರ್ ಪಾಸ್  ಬಳಿ ಇರುವ ನವೀನ್ ಚಂದ್ರ ಎಂಬ ವರ ದುರ್ಗಾದೇವಿ ಕಾಂಪ್ಲೆಕ್ಸ್  ನಲ್ಲಿ ನಮ್ದೆ ಎಂಬ ಹೆಸರಿನ ಬಟ್ಟೆ ಅಂಗಡಿಯನ್ನು ದಿನಾಂಕ 01/11/2020 ರಿಂದ ಬಾಡಿಗೆ ಪಡೆದು  ವ್ಯಾಪಾರ ಮಾಡಿಕೊಂಡಿದ್ದಾರೆ ಎಂದಿದ್ದಾರೆ.

ಗಣೇಶ್ ಪ್ರಸಾದ್ ಶೆಟ್ಟಿ ಯವರ ಬಟ್ಟೆ ಅಂಗಡಿಯಲ್ಲಿ  1 ½  ವರ್ಷಗಳಿಂದ ನಂದನವನ ನಿವಾಸಿ ಎನ್ ರವಿಚಂದ್ರ ಎಂಬ ವರು ಕೆಲಸಕ್ಕೆ ಇದ್ದು, ದಿನಾಂಕ 16/12/2022 ರಂದು ಗಣೇಶ್ ಪ್ರಸಾದ್ ಶೆಟ್ಟಿ ರವರಿಗೆ ಜ್ವರ ಬಂದ ಕಾರಣ ಅಂಗಡಿಯನ್ನು ನೋಡಿಕೊಳ್ಳುವಂತೆ ಎನ್ ರವಿಚಂದ್ರ ರವರಿಗೆ ತಿಳಿಸಿ ಹೋಗಿದ್ದು ಮನೆಯಲ್ಲಿ ಆರೈಕೆಯಲ್ಲಿದ್ದ ಗಣೇಶ್ ಪ್ರಸಾದ್ ಶೆಟ್ಟಿ ರವರು ದಿನಾಂಕ 18/12/2022 ರಂದು ಮಧ್ಯಾಹ್ನ 1:00 ಗಂಟೆಗೆ ಅವರ ಅಂಗಡಿಯ ಪಕ್ಕದಲ್ಲಿರುವ ಮೆಡಿಕಲ್ ಶಾಫ್ ನಲ್ಲಿ ಔಷದಿಯನ್ನು ತರಲು ಬಂದಾಗ ತನ್ನ ಅಂಗಡಿಯು ಬಂದ್  ಆಗಿದ್ದು ಅಂಗಡಿಯ ಎದುರು  KA-20-AA-3765 ನೇ ಆಟೋ ನಿಂತುಕೊಂಡಿದ್ದು  ಆಟೋದಲ್ಲಿ 3 ಚೀಲ ಬಟ್ಟೆ ಹಾಗೂ 2 ಬಾಕ್ಸ್ ಬಟ್ಟೆ ಇರುವುದು ಕಂಡು ಬಂದಿದ್ದು ಆಟೋ ರಿಕ್ಷಾ ಚಾಲಕನಲ್ಲಿ ವಿಚಾರಿಸಿದಾಗ ಎನ್ ರವಿಚಂದ್ರ ರವರು ಬಟ್ಟೆಯನ್ನು  ತುಂಬಿಸಿ ಹೋಗಿದ್ದು ಮನೆಗೆ ತಂದು ಹಾಕುವಂತೆ ತಿಳಿಸಿರುತ್ತಾರೆ ಎಂಬುದಾಗಿ ಹೇಳಿದ್ದು, ಗಣೇಶ್ ಪ್ರಸಾದ್ ಶೆಟ್ಟಿಯವರು ಎನ್ ರವಿಚಂದ್ರ ರವರಿಗೆ ಪೋನ್ ಮಾಡಿದಲ್ಲಿ ಸ್ವಿಚ್ ಆಫ್ ಆಗಿದ್ದು, ಗಣೇಶ್ ಪ್ರಸಾದ್ ಶೆಟ್ಟಿ ಯವರ ಅಂಗಡಿಯಲ್ಲಿನ ಬಟ್ಟೆಯನ್ನು ಅವರಿಗೆ ಹೇಳದೆ ಕೇಳದೆ ಕಳವು ಮಾಡಿಕೊಂಡು ಹೋಗಿದ್ದು ಅವರ ಅಂಗಡಿಯ ಕೀಯನ್ನು ಹಾಗೂ  3 ಲಕ್ಷ ರೂ ಮೊತ್ತದ ಬಟ್ಟೆಯನ್ನು ಕಳವು ಮಾಡಿಕೊಂಡು ಹೋಗಿದ್ದು ಅಲ್ಲದೇ ಅಂಗಡಿಯ ಬಟ್ಟೆಯನ್ನು 2 ಲಕ್ಷ ರೂ ಹಣ ನೀಡಿದರೆ ಬಿಟ್ಟು ಕೊಡುವುದಾಗಿ  ಬೆದರಿಕೆ ಹಾಕಿರುತ್ತಾನೆ ಎಂದು ಗಣೇಶ್ ಪ್ರಸಾದ್ ಶೆಟ್ಟಿ ಯವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.   

error: No Copying!