ಗಂಗೊಳ್ಳಿ: ದಿನಾಂಕ: 16/12/2022(ಹಾಯ್ ಉಡುಪಿ ನ್ಯೂಸ್) ರಸ್ತೆ ಕಾಮಗಾರಿ ನಡೆಸುವ ವೇಳೆ ಖಾಸಗಿ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡಲು ಪ್ರಯತ್ನಿಸಿದವರನ್ನು ಪ್ರಶ್ನಿಸಿದ್ದಕ್ಕೆ ಬೈದು ಹಲ್ಲೆ ನಡೆಸಿದ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಿನಾಂಕ 15-12-2022ರಂದು ಸಂದೀಪ ಖಾರ್ವಿ ಹಾಗೂ ನಿತಿನ್ ಖಾರ್ವಿ ಎಂಬವರು ಗಂಗೊಳ್ಳಿ ಗ್ರಾಮದ ಇಂದೂಧರ ದೇವಸ್ಥಾನದ ಬಳಿ ಇರುವ ದೇವೇಂದ್ರ ಖಾರ್ವಿ ಎಂಬವರ ಮನೆಗೆ ಹೋಗುವ ಮಣ್ಣು ರಸ್ತೆಯಲ್ಲಿ ಜೆ,ಸಿ,ಬಿಯಿಂದ ಕೆಲಸ ಮಾಡಿಸುತ್ತಿದ್ದು, ಈ ರಸ್ತೆ ಕಾಮಗಾರಿಯನ್ನು ಮಾಡುವಾಗ ರಸ್ತೆಯ ಬದಿಯಲ್ಲಿರುವ ದೇವೇಂದ್ರ ಖಾರ್ವಿ ಎಂಬವರಿಗೆ ಸಂಬಂದಿಸಿದ ಜಾಗವನ್ನು ರಸ್ತೆಗೆ ಸೇರಿಸಿಕೊಂಡಿರುವುದನ್ನು ದೇವೇಂದ್ರ ಖಾರ್ವಿಯವರು ನೋಡಿ ವಿಚಾರಿಸಿದಾಗ ಸಂದೀಪ ಖಾರ್ವಿ ಮಾತಿನ ಚಕಮಕಿ ನಡೆಸಿದ್ದು ಆ ಸಮಯ ನಿತಿನ್ ಖಾರ್ವಿಯು ದೇವೇಂದ್ರ ಖಾರ್ವಿಯವರಿಗೆ ಬೈದು ನಾವು 16 ಅಡಿ ರಸ್ತೆ ಮಾಡುತ್ತೇವೆ ,ಕೇಳಲು ನೀನು ಯಾರು ಎಂದು ಹೇಳಿ ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ ರಸ್ತೆಯಲ್ಲಿರುವ ಒಂದು ಕಲ್ಲನ್ನು ತೆಗೆದುಕೊಂಡು ದೇವೇಂದ್ರರ ಮುಖಕ್ಕೆ ಹೊಡೆದನು ಎನ್ನಲಾಗಿದೆ. ಅಲ್ಲದೇ ಸಂದೀಪ ಖಾರ್ವಿಯು ಕೈಯಿಂದ ದೇವೇಂದ್ರರ ಬಲಕೈಗೆ ಹಾಗೂ ಬೆನ್ನಿಗೆ ಗುದ್ದಿದ್ದು ಆ ಸಮಯ ದೇವೇಂದ್ರರು ಬೊಬ್ಬೆ ಹಾಕಿದಾಗ ಆಸುಪಾಸಿನವರು ಬರುವುದನ್ನು ನೋಡಿದ ಆವರು “ಈ ದಿನ ಇಷ್ಷಕ್ಕೆ ಬಿಟ್ಟಿದ್ದೇವೆ ಮುಂದಕ್ಕೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ” ಎಂಬುವುದಾಗಿ ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ ಎಂದು ದೇವೇಂದ್ರ ಖಾರ್ವಿಯವರು ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.