Spread the love
  • ಉಡುಪಿ: ಡಿಸೆಂಬರ್ 2 (ಹಾಯ್ ಉಡುಪಿ ನ್ಯೂಸ್) ಉಡುಪಿಯ ಮಹಿಳೆಯೋರ್ವರಿಗೆ ಸಾಮಾಜಿಕ ಜಾಲ ತಾಣದಲ್ಲಿ ಪರಿಚಯಗೊಂಡ ವ್ಯಕ್ತಿ ಯೋರ್ವ ಮಹಿಳೆಯನ್ನು ನಂಬಿಸಿ 7 ಲಕ್ಷ ರೂಪಾಯಿವರೆಗೆ ವಂಚಿಸಿರುವ ಬಗ್ಗೆ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.
  • ಸೆಪ್ಟೆಂಬರ್‌ ತಿಂಗಳಿನಲ್ಲಿ ಸಾಮಾಜಿಕ ಜಾಲತಾಣವಾದ ಇನ್ಸ್ ಟ್ರಾಗ್ರಾಂ ನಲ್ಲಿ Leonard Hanks ಎಂಬ ವ್ಯಕ್ತಿ ತಾನು ಸ್ಕಾಟ್ಲೆಂಡ್ ನಲ್ಲಿ ಡಾಕ್ಟರ್ ಎಂಬುದಾಗಿ ಪರಿಚಯಿಸಿಕೊಂಡು, ನಂತರ ವಾಟ್ಸ್ಅಪ್ ಮುಖೇನ ಚಾಟಿಂಗ್ ನಡೆಸಿ, ಸ್ನೇಹಿತರಾಗಿದ್ದು, ನವಂಬರ್‌ ಮೊದಲನೇ ವಾರದಲ್ಲಿ ಆತನು ಕೋರಿಯರ್‌ ಪಾರ್ಸೆಲ್‌ ಮುಖೇನಾ ಗಿಫ್ಟ್‌ ನ್ನು ಕಳುಹಿಸುವುದಾಗಿ ಮಹಿಳೆಯನ್ನು ನಂಬಿಸಿದ್ದು, ಅದಾದ ಬಳಿಕ ನವದೆಹಲಿ ಇಂಟರ್‌ ನ್ಯಾಶನಲ್‌ ಏರ್‌ಪೋರ್ಟ್ ಕೊರಿಯರ್‌ ಕಚೇರಿಯಿಂದ ಅಪರಿಚಿತ ವ್ಯಕ್ತಿ ಕರೆ ಮಾಡಿ ಸ್ಕಾಟ್ಲೆಂಡ್ ನಿಂದ ಬಂದಿರುವ ಪಾರ್ಸೆಲ್ ಗೆ ಪಾರ್ಸೆಲ್ ಚಾರ್ಜ್‌, ಇನ್‌ಕಮ್‌ ಟ್ಯಾಕ್ಸ್, ಪೌಂಡ್‌ ಹಣವನ್ನು ಭಾರತೀಯ ರೂಪಾಯಿಗೆ ಬದಲಾಯಿಸಲು ಹಣ ಪಾವತಿಸಬೇಕು ಎಂದು ತಿಳಿಸಿದ್ದು, ಮಹಿಳೆ ಅದನ್ನು ನಂಬಿ, ಅವರು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು ರೂ. 6,91,000/- ಹಣವನ್ನು ಪಾವತಿಸಿರುತ್ತಾರೆ. ವಂಚಕ ತನ್ನನ್ನು ಡಾಕ್ಟರ್ ಎಂದು, ಗಿಫ್ಟ್ ಪಾರ್ಸೆಲ್  ಕಳಿಸುವುದಾಗಿ ನಂಬಿಸಿ, ನವದೆಹಲಿಯ ಇಂಟರ್‌ ನ್ಯಾಶನಲ್‌ ಎರ್‌ಪೋರ್ಟ್ ಕೊರಿಯರ್‌ ಕಚೇರಿಯಿಂದ ಬಿಂಬಿಸಿ, ಮಹಿಳೆ ಯಿಂದ  ಒಟ್ಟು ರೂ. 6,91,000/- ಹಣವನ್ನು ಪಡೆದು, ಪಾರ್ಸೆಲ್ ಕಳುಹಿಸದೇ, ಕಳುಹಿಸಿದ ಹಣವನ್ನು ವಾಪಾಸು ನೀಡದೇ ಮೋಸ ಮಾಡಿರುತ್ತಾರೆ ಎಂದು ವಂಚನೆಗೆ ಒಳಗಾದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಉಡುಪಿ ಸೆನ್‌ ಅಪರಾಧ ಠಾಣೆಯಲ್ಲಿ    ಪ್ರಕರಣ ದಾಖಲಾಗಿರುತ್ತದೆ.
error: No Copying!