ಉಡುಪಿ: ನವೆಂಬರ್ 30 (ಹಾಯ್ ಉಡುಪಿ ನ್ಯೂಸ್) ನಗರದ ಚಿನ್ನಾಭರಣದ ಅಂಗಡಿಯೊಂದರಲ್ಲಿ ಗ್ರಾಹಕರ ಸೋಗಿನಲ್ಲಿ ಬಂದ ಮೂವರು ಅಂಗಡಿ ಮಾಲೀಕರನ್ನು ಯಾಮಾರಿಸಿ ಚಿನ್ನ ಕದ್ದಿರುವ ಘಟನೆ ನಡೆದಿದೆ.
ಉಡುಪಿ ನಗರದ ಮಾರುತಿ ವಿಥಿಕಾ, ಸರಸ್ವತಿ ಸದನ ನಿವಾಸಿ ಬಿ.ಸತ್ಯನಾರಾಯಣ ಶೇಟ್ ಇವರು ಉಡುಪಿ ಕನಕದಾಸ ರಸ್ತೆಯಲ್ಲಿರುವ ಪಾಂಡುರಂಗ ಜುವೆಲ್ಲರ್ಸ್ ಎಂಬ ಅಂಗಡಿಯನ್ನು ನಡೆಸಿಕೊಂಡಿದ್ದು, ದಿನಾಂಕ 27/11/2022 ರಂದು 4:40 ಗಂಟೆ ಸಮಯದಲ್ಲಿ ಅವರ ಅಂಗಡಿಗೆ ಗ್ರಾಹಕರಂತೆ ಬಂದ ಇಬ್ಬರು ಅಪರಿಚಿತ ಮಹಿಳೆಯರು ಮತ್ತು ಓರ್ವ ಗಂಡಸು ಸತ್ಯನಾರಾಯಣ ಶೇಟ್ ರವರ ಗಮನವನ್ನು ಬೇರೆಡೆಗೆ ಸೆಳೆದು 4 ಗ್ರಾಂ ತೂಕದ ಚಿನ್ನದ ಸರವನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸ್ವತ್ತಿನ ಮೌಲ್ಯ ರೂಪಾಯಿ 22,000/- ಆಗಿರುತ್ತದೆ ಎಂದು ದೂರು ನೀಡಿದ್ದಾರೆ . ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ .