Spread the love

ಹಿರಿಯಡ್ಕ: ನವೆಂಬರ್ 25 (ಹಾಯ್ ಉಡುಪಿ ನ್ಯೂಸ್) ವಯೋವೃದ್ದೆ ಮಹಿಳೆಗೆ ಆರೈಕೆ ಮಾಡಲೆಂದು ಉಡುಪಿಯ ಉಷಾ ಮ್ಯಾರೇಜ್ ಬ್ಯೂರೋದವರು ನೇಮಿಸಿದ್ದ ಹೋಂ ನರ್ಸ್ ಓರ್ವರು ವಯೋವೃದ್ಧೆಯ ಚಿನ್ನದ ನೆಕ್ಲೆಸ್ ನೊಂದಿಗೆ ಪರಾರಿಯಾಗಿರುವ ಬಗ್ಗೆ ದೂರು ದಾಖಲಾಗಿದೆ.

ಉಡುಪಿ ತಾಲೂಕು , ಆತ್ರಾಡಿ ಗ್ರಾಮದ, ಮದಗ,ಚೆನ್ನಿಬೆಟ್ಟು ನಿವಾಸಿ ವಸಂತ ಶೆಟ್ಟಿ (65) ಇವರ ತಾಯಿ ಸರಸ್ವತಿ ರವರು  ವಯೋವೃದ್ದರಾಗಿದ್ದು  98 ವರ್ಷ ವಯಸ್ಸಾಗಿರುತ್ತದೆ. ಅವರಿಗೆ  ಕಳೆದ 2 ವರ್ಷಗಳಿಂದ ಎದ್ದು ಕೂರಲು ಆಗುವುದಿಲ್ಲ,  ಜೋರಾಗಿ ಮಾತನಾಡಲು ಆಗುವುದಿಲ್ಲ, ಆದುದರಿಂದ ಕಳೆದ 8-9 ತಿಂಗಳಿನಿಂದ ಅವರ ತಾಯಿಯ ಆರೈಕೆಯನ್ನು ನೋಡಿಕೊಳ್ಳಲು ಉಡುಪಿಯ ಉಷಾ ಮ್ಯಾರೇಜ್ ಬ್ಯುರೋ  & ಜಾಬ್ ಲಿಂಕ್ಸ್ ಎಂಬ   ಏಜೆನ್ಸಿ ಯವರು ಹೋಂ ನರ್ಸ್ ರೇಖಾ ಹೆಬ್ಬಳ್ಳಿ  ಎಂಬವರನ್ನು   ನೇಮಿಸಿ ಕಳುಹಿಸಿದ್ದರು ಎನ್ನಲಾಗಿದೆ .

   ದಿನಾಂಕ 20/10/2022 ರಿಂದ ರೇಖಾ ಹೆಬ್ಬಳ್ಳಿ, ವಸಂತ ಶೆಟ್ಟಿ ಯವರ ತಾಯಿಯ ಆರೈಕೆಯನ್ನು  ನೋಡಿಕೊಂಡಿದ್ದು  ,  ದಿನಾಂಕ 21/11/2022 ರಂದು  ಸಾಯಂಕಾಲ 4:30 ಗಂಟೆಗೆ  ರೇಖಾ  ಹೆಬ್ಬಳ್ಳಿ  ಯಾರಿಗೂ  ಹೇಳದೇ ಮನೆಯಿಂದ ಹೋಗಿರುತ್ತಾಳೆ.  ನಂತರ ವಸಂತ ಶೆಟ್ಟಿ ಯವರು ಅಮ್ಮನ ಬಳಿಗೆ ಸಂಜೆ 4:50 ಗಂಟೆಗೆ  ಹೋಗಿ ನೋಡಿದಾಗ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಚೈನ್ ಇರಲಿಲ್ಲ, ಚಿನ್ನದ ಚೈನ್ 3 ½ ಪವನ್‌ತೂಕದ ಡಿ.ಸಿ  ಮಾದರಿ ಚೈನಾಗಿದ್ದು ,ಅದರ ಮೌಲ್ಯ 1,45,000/-ರೂಪಾಯಿ ಆಗಿರುತ್ತದೆ ಎಂದಿದ್ದಾರೆ. ರೇಖಾ ರವರಿಗೆ ಫೋನ್ ಮಾಡಿದಾಗ ಆಕೆಯು ಫೋನ್ ಸ್ವೀಕರಿಸುತ್ತಿರಲಿಲ್ಲ, ವಸಂತ ಶೆಟ್ಟಿ ಯವರ ತಾಯಿಯ ಚಿನ್ನದ ಚೈನ್ ಕಳವಾಗಿದ್ದು ಚೈನನ್ನು  ರೇಖಾ ಕಳವು  ಮಾಡಿಕೊಂಡು ಹೋಗಿರುವ ಬಗ್ಗೆ  ಸಂಶಯ ಇರುವುದಾಗಿ ಪೊಲೀಸರಿಗೆ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  

error: No Copying!